Publish Date: Tue, 16 Nov 2021 (15:31 IST)
Updated Date: Tue, 16 Nov 2021 (15:34 IST)
ಮಿನಿ ವಿಧಾನಸೌಧದ ಹೆಸರನ್ನು ತಾಲೂಕು ಆಡಳಿತ ಸೌಧ ಎಂದು ಬದಲಿಸಿ ಆದೇಶ ಹೊರಡಿಸಲಾಗಿದೆ.ರಾಜ್ಯದಲ್ಲಿನ ಕಂದಾಯ ಇಲಾಖೆಯ ತಾಲೂಕು ಮಟ್ಟದಲ್ಲಿನ ಮಿನಿ ವಿಧಾನಸೌಧದ ಕಟ್ಟಡಗಳಿಗೆ, ಇದುವರೆಗೆ ಮಿನಿ ವಿಧಾನಸೌಧವೆಂದೇ ಕರೆಯಲಾಗುತ್ತಿತ್ತು. ಈಗ ರಾಜ್ಯ ಸರ್ಕಾರ ಹೆಸರನ್ನು ಬದಲಾಯಿಸಿದೆ. ತಾಲೂಕು ಆಡಳಿತ ಸೌಧ ಎಂದು ನಾಮಾಂಕಿತ ಮಾಡಲಾಗಿದೆ. ಕಂದಾಯ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಜಯಲಕ್ಷ್ಮೀ ಸುತ್ತೋಲೆ ಹೊರಡಿಸಿದ್ದಾರೆ. ಪ್ರಸ್ತುತ ರಾಜ್ಯದ ಎಲ್ಲಾ ತಾಲೂಕುಗಳಲ್ಲಿರುವ ಮಿನಿ ವಿಧಾನಸೌಧದ ಹೆಸರನ್ನು ತಾಲೂಕು ಆಡಳಿತ ಸೌಧ ಎಂದು ಬದಲಿಸಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವಂತೆ ಸಕ್ಷಮ ಪ್ರಾಧಿಕಾರಗಳಿಗೆ ಸೂಚಿಸಲಾಗಿದೆ.