Select Your Language

Notifications

webdunia
webdunia
webdunia
webdunia

ಇಂಟರ್ನೆಟ್ ಸಂಪರ್ಕ ಬೇಡ ಎಂದಿದ್ದಕ್ಕೆ ಬಿಯರ್ ಬಾಟಲ್ ನಿಂದ ಹೊಡೆಯೋದಾ

ಇಂಟರ್ನೆಟ್ ಸಂಪರ್ಕ ಬೇಡ ಎಂದಿದ್ದಕ್ಕೆ ಬಿಯರ್ ಬಾಟಲ್ ನಿಂದ ಹೊಡೆಯೋದಾ
ಬೆಂಗಳೂರು , ಶನಿವಾರ, 4 ಏಪ್ರಿಲ್ 2020 (14:30 IST)
ವಿಶ್ವದಾದ್ಯಂತ ಕೊರೋನಾ ಭೀತಿಯಲ್ಲಿ ಜನರು ತತ್ತರಿಸಿ ಹೋಗಿದ್ರೆ, ಇಲ್ಲೋರ್ವ ಇಂಟರ್ನೆಟ್ ಪ್ರೋವೈಡರ್ ಮಾಲೀಕನಿಗೆ ಪಿಜಿ ಯವರು  ಇಂಟರ್ನೆಟ್ ಸಂಪರ್ಕ ತೆಗೆದುಕೊಳ್ಳಲು ನಿರಾಕರಣೆ ಮಾಡಿದ್ದಾರೆನ್ನುವ ಚಿಂತೆಯಾಗಿದೆ.

ಇಂಟರ್ನೆಟ್ ಪ್ರೋವೈಡರ್ ಅಂಡ್ ಗ್ಯಾಂಗ್ ನವರು ಪಿಜಿ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿರುವಂತಹ ಘಟನೆ ಬೆಂಗಳೂರು ಹೊರವಲಯ ಎಲೆಕ್ಟ್ರಾನಿಕ್ ಸಿಟಿ ಬಳಿಯ ಗೋವಿಂದ ಶೆಟ್ಟಿ ಪಾಳ್ಯದಲ್ಲಿರಯವ ಕ್ವೀನ್ಸ್ ಲಾಂಜ್ ಪಿಜಿ ಬಳಿ ನಡೆದಿದೆ. ಕಳೆದ ಕೆಲವು ದಿನಗಳಿಂದ ಪಿಜಿ ಯಲ್ಲಿ ಇಂಟರ್ನೆಟ್ ಸಂಪರ್ಕ ಹಾಕಿಸಿಕೊಳ್ಳುವಂತೆ ಇಂಟರ್ ಪ್ರೋವೈಡರ್ ಮಾಲೀಕ ಶೇಖರ್ ಪಿಜಿಯವರ ಬಳಿ ಕೇಳುತ್ತಿದ್ದನು. ಆದರೆ ಇಂಟರ್ನೆಟ್ ಹಾಕಿಸಿಕೊಳ್ಳಲು ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಪಿಜಿ ಸಿಬ್ಬಂದಿ ಶ್ರೀನಿವಾಸ್ ಎಂಬಾತನನ್ನು ಥಳಿಸಿದ್ದಾರೆ.

ತಡರಾತ್ರಿ ಕಂಠ ಪೂರ್ತಿ ಮದ್ಯ ಸೇವಿಸಿ ಬಿಯರ್ ಬಾಟಲ್ ಜೊತೆಗೆ ಗ್ಯಾಂಗ್ ಅನ್ನು ಕರೆತಂದು ಪಿಜಿ ಸಿಬ್ಬಂದಿ ಶೇಖರ್ ಮೇಲೆ ಬಿಯರ್ ಬಾಟಲ್ ನಿಂದ ಹಲ್ಲೆಗೆ ಯತ್ನಿಸಿ ಪಿಜಿ ಕಚೇರಿಯ ಮುಂಭಾಗದ ಗ್ಲಾಸ್ ಅನ್ನು ಪುಡಿ ಗೊಳಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹಲ್ಲೆ ನಡೆಸಿರುವ ದೃಶ್ಯಾವಳಿಗಳು ಪಿಜಿ ಮುಂಭಾಗದ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಭೀತಿಯಲ್ಲಿದ್ದ ಜನರು ಮನೆ ಬಿಟ್ಟು ಹೊರಗೆ ಓಡಿದ್ಯಾಕೆ?