Webdunia - Bharat's app for daily news and videos

Install App

ರಾಜ್ಯದಲ್ಲಿ ಸರ್ಕಾರ ಇದೆಯೋ, ಇಲ್ಲವೋ: ಯುಟಿ ಖಾದರ್

Webdunia
ಶನಿವಾರ, 31 ಜುಲೈ 2021 (17:59 IST)
ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊರೊನಾ ನಿಯಂತ್ರಿಸುವಲ್ಲಿ ಹಿಂದಿನ ಬಿ.ಎಸ್.ವೈ ಸರಕಾರ ವಿಫಲವಾಗಿದೆ. ನೂತನ ಮುಖ್ಯಮಂತ್ರಿ ಎಷ್ಟು ಯಶಸ್ವಿಯಾಗುತ್ತಾರೆ ನಾವು ನೋಡಬೇಕು. ಅವರಿಗೆ ಬೇಕಾಗುವ ಮಂತ್ರಿ ಸ್ಥಾನ ಮಾಡಿಕೊಳ್ಳುವ ಅವಕಾಶ ಕೂಡ ಇಲ್ಲ. ಕೊರೋನಾ ಹೆಚ್ಚು ಉಲ್ಬಣಗೊಂಡಿದೆ. ಅಧಿಕಾರಿಗಳು ಗೊಂದಲದಲ್ಲಿದ್ದಾರೆ. ಪ್ರವಾಹ ಪರಿಸ್ಥಿತಿಯಲ್ಲಿ ಜನರ ಕಷ್ಟ ಆಲಿಸಲು ಮಂತ್ರಿಗಳು ಕೂಡ ಇಲ್ಲ. ಇವೆಲ್ಲ ರಾಜಕೀಯ ಗೊಂದಲ ಮುಖ್ಯಮಂತ್ರಿ ಬದಲಾವಣೆ, ಈ ಸಮಯದಲ್ಲಿ ಬೇಕಿತ್ತಾ ಎಂದು ಪ್ರಶ್ನಿಸಿದರು.
ಇನ್ನು ಬಿ.ಎಸ್ ವೈ ಅವರಿಗೆ ಕಾಂಗ್ರೆಸ್ ನವರು ಅತ್ಯಂತ ಗೌರವ ಕೊಟ್ರು. ಬಿಜೆಪಿಯವರೇ ಯಡಿಯೂರಪ್ಪನವರಿಗೆ ಅತ್ಯಂತ ಕೆಟ್ಟ ಶಬ್ದಗಳಲ್ಲಿ ಟೀಕೆ ಮಾಡಿದ್ರು. ಬಿಜೆಪಿ ಶಾಸಕರು, ಬಿಜೆಪಿ ಮಂತ್ರಿಗಳು ಹಿಂದಿನ‌ ಮುಖ್ಯಮಂತ್ರಿ ಅವರಿಗೆ ತೊಂದರೆ ಕೊಟ್ರು. ಆ ರೀತಿಯಲ್ಲಿ ಪ್ರಸ್ತುತ ಮುಖ್ಯಮಂತ್ರಿ ಅವರಿಗೆ ತೊಂದರೆ ಕೊಡಬೇಡಿ. ಬಸವರಾಜ್ ಬೊಮ್ಮಾಯಿ ಅವರಿಗೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ. ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಎಂದು ಕೇಂದ್ರಕ್ಕೆ ಪತ್ರ ಬರೆದವರು ಬಿಜೆಪಿಯವರೆ. ಓಪನ್ ಆಗಿ ಸಿಎಂ ವಿರುದ್ಧ ಸ್ಟೇಟ್ ಮೆಂಟ್ ಕೊಟ್ಟವರು ಬಿಜೆಪಿ ಮಂತ್ರಿಗಳೇ. ಮುಖ್ಯಮಂತ್ರಿ ವಿರುಧ್ದ ರಾಜ್ಯಪಾಲರಿಗೆ ಪತ್ರ ಬರೆದವರು ಆವರ ನಾಯಕರುಗಳು. ಈಗಿನ‌ ಮುಖ್ಯಮಂತ್ರಿಗಳಿಗೆ ಆ ತೊಂದರೆ ಕೊಡಬೇಡಿ ಎಂದು ಮನವಿ ಮಾಡಿದರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments