Publish Date: Fri, 04 Aug 2017 (09:18 IST)
Updated Date: Fri, 04 Aug 2017 (09:24 IST)
ಬೆಂಗಳೂರು: ಇಂದು ವರಮಹಾಲಕ್ಷ್ಮಿ ಹಬ್ಬ. ಆದರೆ ಐಟಿ ದಾಳಿಗೊಳಗಾಗಿರುವ ಸಚಿವ ಡಿಕೆ ಶಿವಕುಮಾರ್ ಮನೆಯಲ್ಲಿ ಅಧಿಕಾರಿಗಳ್ದೇ ಸದ್ದು.
ಪ್ರತೀ ವರ್ಷ ಡಿಕೆಶಿ ಮನೆಯಲ್ಲಿ ಹಬ್ಬ ಅದ್ಧೂರಿಯಾಗಿ ನಡೆಯುತ್ತದೆ. ಆದರೆ ಈ ಬಾರಿ ಐಟಿ ಅಧಿಕಾರಿಗಳು ತಪಾಸಣೆ ನಡೆಸುತ್ತಿರುವುದರಿಂದ ಸಚಿವರು ಮತ್ತು ಮನೆಯ ಸದಸ್ಯರಿಗೆ ಅಕ್ಷರಶಃ ದಿಗ್ಬಂಧನ ಹೇರಲಾಗಿದೆ.
ಇಂದು ಹಬ್ಬವಿರುವ ಕಾರಣ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಹೀಗಾಗಿ ಐಟಿ ಅಧಿಕಾರಿಗಳು ತಪಾಸಣೆ ನಡೆಸುತ್ತಿರುವ ಡಿಕೆಶಿ ಮನೆ ಹಾಗೂ ಸಂಬಂಧಿಗಳ ಮನೆಯಲ್ಲಿ ಮಕ್ಕಳೂ ಇದ್ದಾರೆ. ಆದರೆ ನಿನ್ನೆ ಅಧಿಕಾರಿಗಳು ಮಕ್ಕಳಿಗೆ ಮಾತ್ರ ಶಾಲೆಗೆ ಹೋಗಲು ಅನುವು ಮಾಡಿಕೊಟ್ಟಿದ್ದರು.