Publish Date: Fri, 04 Aug 2017 (08:27 IST)
Updated Date: Fri, 04 Aug 2017 (08:32 IST)
ವರ ಮಹಾಲಕ್ಷ್ಮೀ ಹಬ್ಬದ ದಿನವೂ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ಮುಂದುವರೆದಿರುವ ಬೆನ್ನಲ್ಲೇ ಐಟಿ ಇಲಾಖೆಯಿಂದ ನಿನ್ನೆ ಬೆಳಗ್ಗೆಯೇ ಬೆಚ್ಚಿ ಬೀಳಿಸುವ ಸುದ್ದಿ ಹೊರಬಿದ್ದಿದೆ.
ಈಗಲ್ ಟನ್ ರೆಸಾರ್ಟ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭ ಸಚಿವ ಡಿ.ಕೆ. ಶಿಎವಕುಮಾರ್ ಹರಿಯುತ್ತಿದ್ದರೆನ್ನಲಾದ ಕೆಲ ಡೈರಿ ದಾಖಲೆಗಳನ್ನ ಮಮಜರ್ ಮಾಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಈ ದಾಖಲೆಗಳು ಸಚಿವರು ಮತ್ತು ಹೈಕಮಾಂಡ್ ನಡುವಿನ ಹಣ ವರ್ಗಾವಣೆ ಮಾಹಿತಿ ಬಿಚ್ಚಿಟ್ಟವೆ ಎನ್ನಲಾಗುತ್ತಿದೆ. ಯಾವ ಯಾವ ಮುಖಂಡರಿಗೆ ಎಷ್ಟೆಷ್ಟು ಹಣ ನೀಡಲಾಗಿದೆ ಎಂಬ ಮಾಹಿತಿಯೂ ಇದರಲ್ಲಿದೆ ಎನ್ನಲಾಗಿದೆ.
ಈ ಮಧ್ಯೆ ಐಟಿ ಅಧಿಕಾರಿಗಳು ವಶಪಡಿಸಿಕೊಮಡಿರುವ ಹರಿದ ದಾಖಲೆಗಳು ಸಿಕ್ಕಿರುವುದು ಟೈಮ್ಸ್ ನೌ ವರದಿ ಮಾಡಿದೆ. ಈಗಾಗಲೇ ಐಟಿ ದಾಳಿಯಿಂದ ತತ್ತರಿಸಿರುವ ಡಿ.ಕೆ. ಶಿವಕುಮಾರ್ ಅವರಿಗೆ ಇದು ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಬಗ್ಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದರು. ಐಟಿ ದಾಳಿ ವೇಳೆ ದಾಖಲೆ ಹರಿಯುವ ಕೆಲಸ ನಡೆಯುತ್ತಿತ್ತು ಎಂದು ಜೇಟ್ಲಿ ಹೇಳಿದ್ದರು.