Webdunia - Bharat's app for daily news and videos

Install App

ನಗರದಲ್ಲಿ ಇದ್ದು ಇಲ್ಲದಂತಾದ ಇ – ಶೌಚಾಲಯ

Webdunia
ಶುಕ್ರವಾರ, 3 ಜೂನ್ 2022 (21:00 IST)
ಪ್ರತಿ ವರ್ಷ ಸ್ವಚ್ಛ ಭಾರತ ಸಮೀಕ್ಷೆ ಬಂದಾಗ ಪಾಲಿಕೆ ನಿದ್ದೆಯಿಂದ ಎದ್ದವರಂತೆ ಚುರುಕಾಗುತ್ತದೆ. ಸ್ವಚ್ಚತೆಗಾಗಿ ಹಲವು ಕೆಲಸ ಕಾರ್ಯಗಳನ್ನು ಸಮರೋಪಾದಿಯಲ್ಲಿ ಮಾಡುತ್ತದೆ. ಆದ್ರೆ ಇ – ಶೌಚಾಲಯ ನಿರ್ಮಿಸಿ  ಯಾವ ಪ್ರಯೋಜನವು ಇಲ್ಲದಂತಿದೆ. ಕೆಲವು ಕಡೆ ಕೆಟ್ಟು ನಿಂತರೆ ಕೆಲವೆಡೆ ಸಾರ್ವಜನಿಕವಾಗಿ ಬಳಸಿಕೊಳ್ಳುತ್ತಿಲ್ಲ.ಸ್ವಚ್ಚತೆಗಾಗಿ ಹಲವು ಕೆಲಸ ಕಾರ್ಯಗಳನ್ನು ಸಮರೋಪಾದಿಯಲ್ಲಿ ಮಾಡುತ್ತದೆ. ತಂತ್ರಜ್ಞಾನ ಆಧಾರಿತ ಸ್ವಯಂಪ್ರೇರಿತವಾಗಿ ಸ್ವಚ್ಛ ಸಾಮರ್ಥ್ಯವಿರುವ ಇ-ಶೌಚಾಲಯವನ್ನು ಉಳಿಸಿಕೊಳ್ಳುವುದು ಬಿಬಿಎಂಪಿಗೆ ತಲೆನೋವಾಗಿದೆ. ಬಿಬಿಎಂಪಿ ಕಳೆದ ಎರಡು ವರ್ಷಗಳ ಹಿಂದೆ ಸಾರ್ವಜನಿಕರ ಶೌಚಾಲಯ ತಪ್ಪಿಸುವ ಉದ್ದೇಶದಿಂದ ಮತ್ತು ಪರಿಸರಸ್ನೇಹಿ ಮತ್ತು ಸಾರ್ವಜನಿಕರ ತುರ್ತು ಅಗತ್ಯಕ್ಕೆ ಪೂರಕವಾಗಿ ಇವುಗಳನ್ನು ನಿರ್ಮಿಸಲಾಗಿತ್ತು. ಎರಡು ಹಂತಗಳಲ್ಲಿ 169 ಕಡೆ ಈ ಶೌಚಾಲಯವನ್ನು ಪ್ರಾರಂಭಿಸಿತ್ತು ಆದರೆ ಕೆಲವು ಕಡೆ ಕೆಟ್ಟು ನಿಂತರೆ ಕೆಲವೆಡೆ ಸಾರ್ವಜನಿಕವಾಗಿ ಬಳಸಿಕೊಳ್ಳುತ್ತಿಲ್ಲ ಅನ್ನುವ ಮಾತು ಇದೆ.ಬಿಬಿಎಂಪಿ ಮೊದಲ ಹಂತದಲ್ಲಿ 87 ಮತ್ತು ಎರಡನೇ ಹಂತದಲ್ಲಿ 82 ಶೌಚಾಲಯವನ್ನು ಪರಿಚಯಿಸಿತ್ತು. ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವುದು ಇ – ಶೌಚಾಲಯ ಪರಿಚಯಿಸಿದ ಮೇಲೆ ಕಡಿಮೆಯಾಗಲಿದೆ ಎಂದು ಭಾವಿಸಲಾಗಿತ್ತು. ಆದರೆ ಸಾರ್ವಜನಿಕರು ಈ ಶೌಚಾಲಯವನ್ನು ಬಳಸದೆ ಅದರ ಹಿಂದೆ ಹೋಗಿ ಮೂತ್ರವಿಸರ್ಜನೆ ಮಾಡುತ್ತಿರುವುದರಿಂದ ಮತ್ತಷ್ಟು ಅವಮಾನಕ್ಕೀಡಾಗಿದೆ. ಕಳೆದ ಮೂರು ವರ್ಷಗಳಿಂದಲೂ ಬಯಲು ಬಹಿರ್ದೆಸೆ ಕಾರಣಕ್ಕೆ ಹೆಚ್ಚಿನ ಅಂಕ ಪಡೆಯುವುದು ಸಾಧ್ಯವಾಗುತ್ತಿಲ್ಲ. ಇ – ಶೌಚಾಲಯ  ಯೋಜನೆಗಳು ಹೊರತಾಗಿಯು 194ರ ರ್ಯಾಂಕಿಗೆ ಬೆಂಗಳೂರು ತೃಪ್ತಿ ಪಟ್ಟಿದೆ.  

ಬೆಂಗಳೂರು ನಗರಕ್ಕೆ ಇ – ಶೌಚಾಲಯಗಳ ಅವಶ್ಯಕತೆ ಇರಲಿಲ್ಲ. ಇರುವಂತಹ ಇ – ಶೌಚಾಲಯಗಳನ್ನು ಸಾರ್ವಕನಿಕರು  ಬಳಸಿಕೊಳ್ಳುತ್ತಿಲ್ಲ . ಅಧಿಕಾರಿಗಳು ಹಣ ದೋಚುವ ನೆಪಕ್ಕೆ ಈ  ರೀತಿ ನಿರ್ಮಾಣ ಮಾಡಿ ಕೈ ಬಿಡ್ಡಿದ್ದಾರೆ ಎಂದು ಸಾರ್ವಜನಿಕರು ಆರೋಪ ಮಾಡದ್ದಾರೆ.ಈ ಎಲ್ಲಾ ಕಾರಣಗಳಿಗಾಗಿ ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ ಬೆಂಗಳೂರು ಉತ್ತಮ ಅಂಕ ಗಳಿಸಲು ಸಾಧ್ಯವಾಗುತ್ತಿಲ್ಲ. ಕೆಲವು ಕಡೆ ಹೇಳಿಕೊಳ್ಳುವಂತಹ ಸ್ವಚ್ಛತೆ  ಇ – ಶೌಚಾಲಯಗಳಲ್ಲಿ ಇಲ್ಲದಂತಾಗಿದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments