ಆರ್ಯ ಸಮಾಜ ವಿತರಿಸುವ ಮದುವೆ ಪ್ರಮಾಣಪತ್ರಕ್ಕೆ ಕಾನೂನು ಬದ್ಧತೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಅಲ್ಲದೇ ಈ ಸಮಾಜದಿಂದ ನೀಡುವ ಪ್ರಮಾಣಪತ್ರಕ್ಕೆ ಮಾನ್ಯತೆ ಇಲ್ಲ ಎಂದು ಆದೇಶ ಹೊರಡಿಸಿದೆ.
ಹಿಂದೂ ಸಮಾಜದ ಸುಧಾರಣಾವಾದಿ ಸ್ವಾಮಿ ದಯಾನಂದ ಸರಸ್ವತಿ ೧೯೮೫ರಲ್ಲಿ ಸ್ಥಾಪಿಸಿದ ಆರ್ಯ ಸಮಾಜದಿಂದ ನೀಡಲಾಗುವ ಮದುವೆ ಪ್ರಮಾಣಪತ್ರಕ್ಕೆ ಮಾನ್ಯತೆ ನೀಡಬೇಕು ಎಂದು ವಾದಿಸಲಾಗಿತ್ತು.
ನ್ಯಾಯಮೂರ್ತಿ ಅಜಿತ್ ರಸ್ತೋಗಿ ಮತ್ತು ನ್ಯಾಯಮೂರ್ತಿ ಬಿವಿ ನಾಗರತ್ನ ಅವರನ್ನೊಳಗೊಂಡ ವಿಭಾಗೀಯ ಪೀಠ. ಆರ್ಯ ಸಮಾಜ ನೀಡುವ ಮದುವೆ ಪ್ರಮಾಣಪತ್ರವನ್ನು ಒಪ್ಪಲು ಸಾಧ್ಯವಿಲ್ಲ. ಕೇವಲ ಸಂಬಂಧಪಟ್ಟ ಸಂಸ್ಥೆಗಳಿಂದ ನೀಡಿದ ಅಧಿಕೃತ ಪ್ರಮಾಣಪತ್ರಕ್ಕಷ್ಟೇ ಪುರಸ್ಕರಿಸಲಾಗುವುದು ಎಂದು ಹೇಳಿದೆ.
ಬಾಲಕಿಯ ಪೋಷಕರು ಮಗಳನ್ನು ಹೊತ್ತೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಯುವಕನ ಮೇಲೆ ದೂರು ನೀಡಿದ್ದರು. ಆದರೆ ಯುವಕ ಆಕೆಯನ್ನು ಮದುವೆ ಆಗಲು ನನಗೆ ಪೂರ್ಣ ಹಕ್ಕು ಇದ್ದು, ಕಾನೂನುಬದ್ಧವಾಗಿ ಮದುವೆ ಆಗಿರುವುದಾಗಿ ವಾದಿಸಿದ್ದ. ಅಲ್ಲದೇ ಮದುವೆ ಆಗಿದ್ದಕ್ಕೆ ಅಖಿಲ ಭಾರತ ಆರ್ಯ ಸಮಾಜದಿಂದ ಮದುವೆ ಪ್ರಮಾಣಪತ್ರ ತೋರಿಸಿದ್ದ.