Daily Horoscope
✕

ರಾಜಕೀಯಕ್ಕೆ ನಿಖಿಲ್ ಕುಮಾರ್: ಮತದಾರರಿಗೆ ಉಚಿತ ಟಿಕೆಟ್

Webdunia
ಶನಿವಾರ, 2 ಫೆಬ್ರವರಿ 2019 (15:04 IST)
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಪುತ್ರ ಹಾಗೂ ನಿಖಿಲ್ ಕುಮಾರ್ ಅವರನ್ನು ರಾಜಕೀಯಕ್ಕೆ ತರಲು ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ.  ಹೀಗಾಗಿ ಜೆಡಿಎಸ್ ಮುಖಂಡರು ಹೊಸ ಪ್ಲಾನ್ ಮಾಡಿದ್ದು, ಜನರಿಗೆ ಉಚಿತ ಸಿನಿಮಾ ಟಿಕೆಟ್ ಕೊಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಈಗಾಗಲೇ ಬಿಡುಗಡೆಯಾಗಿರುವ ಸೀತಾರಾಮ ಕಲ್ಯಾಣ ಚಿತ್ರದ ಟಿಕೆಟ್‌ಗಳನ್ನು ಮಂಡ್ಯ ಕ್ಷೇತ್ರದಲ್ಲಿ ಉಚಿತವಾಗಿ ವಿತರಿಸಲಾಗಿದೆ ಎಂದು ತಿಳಿದು ಬಂದಿದೆ.

ಸಿಎಂ ಕುಮಾರಸ್ವಾಮಿಯವರು ತಮ್ಮ ಪುತ್ರ ನಿಖಿಲ್ ಕುಮಾರ್ ಅವರನ್ನು ತಾವು ಅಧಿಕಾರದಲ್ಲಿದ್ದ ಸಂದರ್ಭದಲ್ಲೇ ರಾಜಕೀಯಕ್ಕೆ ಕರೆತರಬೇಕೆಂಬ ಅಭಿಲಾಷೆ ಹೊಂದಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಸಲು ಚಿಂತನೆ ನಡೆಸಿದ್ದಾರೆನ್ನಲಾಗಿದೆ. ಹೀಗಾಗಿ ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಿಖಿಲ್ ಕುಮಾರ್ ಪರ ಪೂರಕ ವಾತಾವರಣ ಸೃಷ್ಟಿಸುವ ಸಿದ್ಧತೆಗಳು ನಡೆಯುತ್ತಿವೆ.  ಜ. 25 ರಂದು ಬಿಡುಗಡೆಯಾಗಿದ್ದ ನಿಖಿಲ್ ಕುಮಾರ್ ಅಭಿನಯದ ‘ಸೀತಾರಾಮ ಕಲ್ಯಾಣ’ ಚಿತ್ರದ ಟಿಕೆಟ್ ಗಳನ್ನು ಕ್ಷೇತ್ರದ ಜನತೆಗೆ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಮಂಡ್ಯ ಜಿಲ್ಲೆಯ ಜೆಡಿಎಸ್ ಚುನಾಯಿತ ಪ್ರತಿನಿಧಿಗಳಿಗೆ ಈ ಜವಾಬ್ದಾರಿ ವಹಿಸಲಾಗಿದೆ ಎಂದು ಹೇಳಲಾಗಿದ್ದು, ಈ ಹಿನ್ನಲೆಯಲ್ಲಿ ಹಳ್ಳಿ ಹಳ್ಳಿಗಳಿಗೆ ತೆರಳಿ ‘ಸೀತಾರಾಮ ಕಲ್ಯಾಣ’ದ ಉಚಿತ ಟಿಕೆಟ್ ನೀಡಿ ವೀಕ್ಷಿಸುವಂತೆ ಮನವಿ ಮಾಡಲಾಗುತ್ತಿದೆ. ಚಿತ್ರ, ಶತದಿನೋತ್ಸವ ಪೂರೈಸುವವರೆಗೂ ಮುಂದುವರಿಯಲಿದ್ದು, ಆ ಬಳಿಕ ಈ ಸಮಾರಂಭವನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಮಾನದಲ್ಲಿ ಅಭಿಜಿತ್ ದಿಪ್ಕೆ ವಶಕ್ಕೆ ಪಡೆಯುವಾಗ ದೇಶದಿಂದ ಹೊರಗೆ ಹಾಕಿ ಎಂದು ಕೂಗಿದ ಸಹಪ್ರಯಾಣಿಕರು: Video

ದಲಿತರ ಸಮಸ್ಯೆ ಕಡೆ ರಾಜ್ಯ ಗೃಹ ಸಚಿವರು ಗಮನ ಹರಿಸಲಿ: ಛಲವಾದಿ ನಾರಾಯಣಸ್ವಾಮಿ

ಅತಿಯಾದ ಆಲೋಚನೆಯಿಂದ ಮುಕ್ತಿ ಪಡೆಯುವುದು ಹೇಗೆ: ಗುರು ಶ್ರೀ ಶ್ರೀ ರವಿ ಶಂಕರ್ ನೀಡಿದ ಸರಳ ಸೂತ್ರಗಳು

ನಮಗ್ಯಾಕೆ ತೊಂದರೆ ಕೊಡಬೇಕು..: ವಿಮಾನದಲ್ಲಿ ಅಭಿಜಿತ್ ದೀಪ್ಕೆ ವರ್ತನೆಗೆ ಬೇಸತ್ತ ಸಹಯಾತ್ರಿಕರ ಆಕ್ರೋಶ Video

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments