Publish Date: Thu, 01 Jan 2026 (17:49 IST)
Updated Date: Thu, 01 Jan 2026 (17:52 IST)
ಬೆಂಗಳೂರು: ನಗರದಾದ್ಯಂತ ಅದ್ಧೂರಿಯಾಗಿ ಹೊಸ ವರ್ಷವನ್ನು ಸ್ವಾಗತ ಮಾಡಿದ್ದು ಇದೀಗ ಈ ದಿನದಂದು ರಾಜ್ಯ ಸರ್ಕಾರಕ್ಕೆ ಮದ್ಯ ಮಾರಾಟದಿಂದ ಭರ್ಜರಿ ಆದಾಯ ಸಂಗ್ರಹವಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಡಿಸೆಂಬರ್‌ನಲ್ಲಿ ₹454.58 ಕೋಟಿ ಹೆಚ್ಚು ಅಬಕಾರಿ ಆದಾಯ ಸಂಗ್ರಹವಾಗಿದೆ.
ಇನ್ನೂ 2024ರ ಹೊಸ ವರ್ಷದಂದು ₹154.04 ಕೋಟಿ, ಡಿ.31 ರಂದು 266. 73 ಕೋಟಿ ಆದಾಯ ಸಂಗ್ರಹವಾಗಿದೆ. ಆದರೆ ಈ ಬಾರಿ ಡಿ. 30 ರಂದು ₹261.09 ಕೋಟಿ, ಡಿ.31 ರಂದು ₹204.10 ಕೋಟಿ ಆದಾಯ ಸಂಗ್ರಹವಾಗಿದೆ.
2024 ರ ಡಿಸೆಂಬರ್ ತಿಂಗಳಿನಲ್ಲಿ ₹3,104 ಕೋಟಿ ಆದಾಯ ಸಂಗ್ರಹವಾಗಿದ್ದರೆ, ಈ ವರ್ಷ ಬರೋಬ್ಬರಿ ₹3,559.08 ಕೋಟಿ ಆದಾಯ ಸಂಗ್ರಹವಾಗಿದೆ.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ವರ್ಷ 1.59 ಲಕ್ಷ ಬಾಕ್ಸ್ ಐಎಂಎಲ್ ಹೆಚ್ಚುವರಿಯಾಗಿ ಮಾರಾಟವಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ವರ್ಷ ಐಎಂಎಲ್ ಮತ್ತು ಬಿಯರ್ ವ್ಯಾಪಾರದಿಂದ ಅಬಕಾರಿ ಇಲಾಖೆಗೆ ಹೆಚ್ಚುವರಿಯಾಗಿ 166.74 ಕೋಟಿ ರೂ. ಆದಾಯ ಬಂದಿದೆ.