ಬೆಂಗಳೂರು : ಎಲ್ಲರಂತೆ ನನಗೂ ಆಕಾಂಕ್ಷೆ ಇದೆ. ಹೈಕಮಾಂಡ್ ತೀರ್ಮಾನ ಮಾಡಿದರೆ ರಾಜಕೀಯದಲ್ಲಿ ಪದೋನ್ನತಿ ಆಗುತ್ತದೆಯೆಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು.
ಗುರುವಾರ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜಕೀಯ ಪದೋನ್ನತಿ ಬಗ್ಗೆ ಮಾಧ್ಯಮದವರು ಪ್ರತಿಕ್ರಿಯಿಸಿದ ಅವರು ನಾನು ಇಲ್ಲಿಯವರೆಗೆ ಆಶಾವಾದಿಯಾಗಿಯೇ ಬದುಕಿದ್ದೇನೆ.
ಜೀವನದಲ್ಲಿ ಏನೇನೋ ಆಗಬೇಕು ಎಂದು ಬಯಕೆ ಎಲ್ಲರಿಗೂ ಇರುವುದು ಸಹಜ. ಮನುಷ್ಯನಿಗೆ ಆಕಾಂಕ್ಷೆ ಎಂಬುದು ಇರಲೇಬೇಕು. ಹೈಕಮಾಂಡ್ ತೀರ್ಮಾನ ಮಾಡಿದರೆ ಆಗುತ್ತದೆ. ಅದು ನಮ್ಮ ವರಿಷ್ಠರಿಗೆ ಬಿಟ್ಟದ್ದು ಎಂದು ತಿಳಿಸಿದರು.
ಈ ವರ್ಷ ಬಾಕಿ ಇರುವ ಎಸ್ಐಟಿ, ಸಿಐಡಿ ತನಿಖೆಗಳನ್ನು ಪೂರ್ಣಗೊಳಿಸುತ್ತೇವೆ.
ಇನ್ನೂ ಧರ್ಮಸ್ಥಳ ಪ್ರಕರಣ ಸೇರಿದಂತೆ ಯಾವುದೆಲ್ಲ ಬಾಕಿ ಪ್ರಕರಣ ಇವೆಯೋ ಈ ವರ್ಷ ಪೂರ್ಣಗೊಳಿಸುತ್ತೇವೆ ಎಂದರು.