Select Your Language

Notifications

webdunia
webdunia
webdunia
Tuesday, 8 April 2025
webdunia

ಕಾರ್ಪೋರೇಟ್ ಕೊಲೆ ಕೇಸಿಗೆ ಹೊಸ ಟ್ವಿಸ್ಟ್

ಮಾಜಿ ಕಾರ್ಪೋರೇಟರ್ ಕೊಲೆ ಕೇಸಿಗೆ ಹೊಸ ಟ್ವಿಸ್ಟ್; ರೇಖಾ ಕದಿರೇಶ್ ಹತ್ಯೆ ಹಿಂದಿದೆ ರೋಚಕ ಕತೆ!

ಕಾರ್ಪೋರೇಟ್
Bangalore , ಶುಕ್ರವಾರ, 2 ಜುಲೈ 2021 (10:33 IST)
ಬೆಂಗಳೂರು (ಜು. 2): ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿತ್ತು. ಈಗಾಗಲೇ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಕೊಲೆಯ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. 

















ಆರೋಪಿಗಳ ವಿಚಾರಣೆ ವೇಳೆ ರೇಖಾ ಹತ್ಯೆಯ ಮತ್ತಷ್ಟು ರೋಚಕ ಮಾಹಿತಿಗಳು ಬೆಳಕಿಗೆ ಬಂದಿವೆ. ರೇಖಾಳ ಗಂಡ ಕದಿರೇಶ್ ಕೂಡ ಈ ಹಿಂದೆ ರಸ್ತೆಯಲ್ಲೇ ಕೊಲೆಯಾಗಿದ್ದರು. ಆ ಕೊಲೆ ಮಾಡಿದವರೇ ರೇಖಾಳ ಕೊಲೆಗೆ ಸ್ಕೆಚ್ ಹಾಕಿದ್ದಾರೆ ಎಂಬುದು ಪೊಲೀಸರ ಲೆಕ್ಕಾಚಾರವಾಗಿತ್ತು. ಆದರೆ, ಅಸಲಿ ಕತೆ ಬೇರೆಯೇ ಇದೆ!
ಕದಿರೇಶ್ ಅವರ ಪಕ್ಕಾ ಶಿಷ್ಯನಾಗಿದ್ದ ಆರೋಪಿ ಪೀಟರ್ ತನ್ನ ಬಾಸ್ ಕೊಲೆಯಿಂದ ಭಾರೀ ತಲೆಕೆಡಿಸಿಕೊಂಡಿದ್ದ. ಕದಿರೇಶ್ ಕೊಲೆಗೆ ಪ್ರತೀಕಾರವಾಗಿ ಮೂವರ ಹತ್ಯೆಗೆ ಪ್ಲಾನ್ ಕೂಡ ಮಾಡಿದ್ದ. ಕದಿರೇಶ್ ಹತ್ಯೆಗೆ ಕಾರಣವಾಗಿದ್ದ ಗಾರ್ಡನ್ ಶಿವ, ನವೀನ್ ಮತ್ತು ವಿನಯ್ ಮೇಲೆ ಪೀಟರ್ ಕಣ್ಣಿಟ್ಟಿದ್ದ. ಕದಿರೇಶ್ ಹಂತಕರನ್ನು ಕೊಲ್ಲಲು ಸಹಾಯ ಮಾಡುವಂತೆ ಪೀಟರ್ ರೇಖಾ ಕದಿರೇಶ್ ಬಳಿ ಮಾತುಕತೆ ನಡೆಸಿದ್ದ. ಆದರೆ, ರೇಖಾ ನಾನು ಯಾವುದೇ ಸಹಕಾರ ಕೊಡಲು ಸಾಧ್ಯವಿಲ್ಲ ಎಂದು ಜಾರಿಕೊಂಡಿದ್ದರು. ಈ ವಿಚಾರಕ್ಕೆ ರೇಖಾ ಮೇಲೆ ಪೀಟರ್ ಕೋಪ ಮಾಡಿಕೊಂಡಿದ್ದ.
webdunia




ಕಳೆದ ನಾಲ್ಕು ತಿಂಗಳ ಹಿಂದೆ ಜೈಲಿನಿಂದ ಅರುಣ್ ಹೊರಬಂದಿದ್ದ. ಜೈಲಿನಿಂದ ಹೊರಬಂದ ಕೂಡಲೇ ಪೀಟರ್ನನ್ನು ಭೇಟಿಯಾದ ಅರುಣ್ ಕದಿರೇಶ್ ಕೊಲೆಗೆ ರೇಖಾ ಕಾರಣ ಎಂದು ಹೇಳಿದ್ದ. ರೇಖಾಳ ವಿರುದ್ಧ ಕದಿರೇಶ್ನ ಸಹೋದರಿ ಮಾಲಾ ಮತ್ತು ಆಕೆಯ ಮಗ ಅರುಣ್ ಪೀಟರ್ನನ್ನು ಎತ್ತಿ ಕಟ್ಟಿದ್ದರು. ಹೀಗಾಗಿ, ಕದಿರೇಶ್ ಹಂತಕರನ್ನು ಕೊಲೆ ಮಾಡಬೇಕು ಎಂದು ಪ್ಲಾನ್ ಮಾಡಿದ್ದ ಪೀಟರ್ ದ್ವೇಷ ಆ ಮೂರು ಜನರ ಬದಲು ರೇಖಾ ಕಡೆಗೆ ತಿರುಗಿತ್ತು.
ಹೀಗಾಗಿಯೇ ರೇಖಾಳನ್ನು ಕೂಡ ಕದಿರೇಶ್ ರೀತಿಯಲ್ಲೇ ಕೊಲೆ ಮಾಡಬೇಕೆಂಬ ಪ್ರತೀಕಾರ ಪೀಟರ್ ಮನಸಿನಲ್ಲಿ ಕೂತಿತ್ತು. ಅದರಂತೆ, ಆಕೆಯ ಚಲನವಲನಗಳನ್ನು ಗಮನಿಸುತ್ತಿದ್ದ ಪೀಟರ್ ಆಕೆಯ ಕೊಲೆಗೆ ತಂಡವೊಂದನ್ನು ತಯಾರಿಸಿಕೊಂಡ. ಆಕೆ ಫುಡ್ ಕಿಟ್ ಕೊಟ್ಟು ಆಫೀಸಿಗೆ ಹೋದ ಬಳಿಕ ತಾನೇ ಆಕೆಯ ಬಳಿ ಹೋಗಿ ಮಾತನಾಡುತ್ತಾ ಆಫೀಸಿನಿಂದ ಹೊರಗೆ ಕರೆದುಕೊಂಡು ಬಂದಿದ್ದ. ತನ್ನ ಗಂಡನ ಕಾಲದಿಂದಲೂ ಪೀಟರ್ ಪರಿಚಿತನಾದ್ದರಿಂದ ರೇಖಾ ಆತನೊಂದಿಗೆ ಮಾತನಾಡುತ್ತಾ ಹೊರಗೆ ಬಂದಿದ್ದರು. ಹಾಗೆ, ಹೊರಗೆ ಬರುತ್ತಿದ್ದಂತೆ ಪೀಟರ್ ಆಕೆಯ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದಿದ್ದ. ಬಳಿಕ ಇನ್ನೋರ್ವ ಆರೋಪಿ ಸೂರ್ಯ ಆಕೆಯ ಹೊಟ್ಟೆಗೆ ತಿವಿದಿದ್ದ. ಸಾಕಷ್ಟು ಬಾರಿ ಇರಿತಕ್ಕೊಳಗಾದ ರೇಖಾ ಪ್ರಾಣ ಉಳಿಸಿಕೊಳ್ಳಲು ರಸ್ತೆಯಲ್ಲೇ ಸ್ವಲ್ಪ ದೂರು ಓಡಿದ್ದರು. ಅಷ್ಟರಲ್ಲಿ ಜನರು ಸೇರಿದ್ದರಿಂದ ಪೀಟರ್ ಮತ್ತು ಸೂರ್ಯ ಪರಾರಿಯಾಗಿದ್ದರು. ಆದರೆ, ತೀವ್ರ ರಕ್ತಸ್ರಾವವಾಗಿದ್ದರಿಂದ ರೇಖಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.
ಕಾಟನ್ ಪೇಟೆ ಪೊಲೀಸರ ವಿಚಾರಣೆ ವೇಳೆ ಕದಿರೇಶ್ ಕೊಲೆಯ ಹಂತಕರಾದ ಮೂವರ ಹತ್ಯೆ ಸಂಚು ಬೆಳಕಿಗೆ ಬಂದಿದೆ. ಕದಿರೇಶ್ನನ್ನು ಕೊಂದವರನ್ನು ಕೊಲೆ ಮಾಡಬೇಕು ಸಹಾಯ ಮಾಡು ಎಂದು ಮೊದಲು ಪೀಟರ್ ರೇಖಾಳನ್ನೆ ಕೇಳಿದ್ದ. ಆಕೆ ನಿರಾಕರಿಸಿದ್ದರಿಂದ ಮತ್ತು ಅರುಣ್ ಹೇಳಿದ ಮಾತಿನಿಂದ ಪೀಟರ್ ಆ ಮೂವರಿಗಿಂತ ಮೊದಲು ರೇಖಾಳನ್ನು ಕೊಲೆ ಮಾಡಬೇಕೆಂದು ನಿರ್ಧರಿಸಿದ್ದ.

 

Share this Story:

Follow Webdunia kannada

ಮುಂದಿನ ಸುದ್ದಿ

ಗಗನಕ್ಕೇರಿದ ಪೆಟ್ರೋಲ್ ಬೆಲೆ!