ಬೆಂಗಳೂರಲ್ಲಿ ಬಿಬಿಎಂಪಿ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ. ಇಷ್ಟು ದಿನ ಬೆಂಗಳೂರಿಗರು ಹಸಿ ಕಸ, ಒಣ ಕಸ ವಿಂಗಡಿಸಿ ಬಿಬಿಎಂಪಿ ವಾಹನಕ್ಕೆ ನೀಡುತ್ತಿದ್ದರು.ಇದರ ಜೊತೆ ತಿಂಗಳಿಗೆ ಕಸದ ಬಿಲ್ ಕೂಡ ಪಾವತಿ ಮಾಡಬೇಕು.
ಈ ಹೊಸ ಪ್ರಸ್ತಾವನೆಯನ್ನು ಬಿಬಿಎಂಪಿ ಸರ್ಕಾರದ ಅಂಗೀಕಾರಕ್ಕೆ ಕಳುಹಿಸಿದೆ. ಈ ಮೂಲಕ ಬೆಂಗಳೂರಿನ ಕಸದ ನಿರ್ವಹಣೆ ಅಚ್ಚುಕಟ್ಟಾಗಿ ಮಾಡಲು ಬಿಬಿಎಂಪಿ ಹೊಸ ಪ್ಲಾನ್ ಮಾಡಿದೆ ಅಂತಾ ಹೇಳಲಾಗ್ತಿದೆ.