ಬೆಂಗಳೂರು: ಇನ್ನೇನು ಗಣೇಶ ಹಬ್ಬ ಬಂತು, ಭರ್ಜರಿಯಾಗಿ ಮೂರ್ತಿ ಕೂರಿಸಿ ಹಬ್ಬ ಮಾಡೋಣ ಎಂದಿದ್ದವರಿಗೆ ಮತ್ತೆ ಕೊರೋನಾ ಕಡಿವಾಣ ಹಾಕಿದೆ.
ಇತ್ತೀಚೆಗೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಗಣೇಶ ಹಬ್ಬವನ್ನು ಸಾರ್ವಜನಿಕವಾಗಿ ಗುಂಪು ಕಟ್ಟಿಕೊಂಡು ಆಚರಿಸುವುದಕ್ಕೆ ಬ್ರೇಕ್ ಹಾಕಿದೆ. ಈ ಬಾರಿಯೂ ಗಲ್ಲಿ ಗಲ್ಲಿ ಗಣೇಶನ ಕೂರಿಸಿ ಹಬ್ಬ ಮಾಡುವಂತಿಲ್ಲ. ಒಂದು ವಾರ್ಡ್ ಗೆ ಒಂದು ಗಣೇಶ ಎಂಬ ನಿಯಮ ಬಂದಿದೆ. ಇದಕ್ಕೂ ಪೊಲೀಸರ ಅನುಮತಿ ಪಡೆಯಬೇಕು.
ಆದರೆ ಇದರಿಂದ ಹೆಚ್ಚು ಸಂಕಷ್ಟಕ್ಕೀಡಾಗಿರುವುದು ಗಣೇಶನ ಮೂರ್ತಿ ತಯಾರಕರು. ಎಷ್ಟೋ ಜನಕ್ಕೆ ಇದುವೇ ಹೊಟ್ಟೆ ಪಾಡಿನ ಉದ್ಯಮವಾಗಿದೆ. ಆದರೆ ಕಳೆದ ಎರಡು ವರ್ಷಗಳಿಂದ ವಿಗ್ರಹಗಳು ಸಾಕಷ್ಟು ಮಾರಾಟವಾಗದೇ ಅವರ ಜೀವನ ಸಂಕಷ್ಟಕ್ಕೀಡಾಗಿದೆ ಎನ್ನುವುದು ಮಾತ್ರ ವಿಪರ್ಯಾಸ.