Select Your Language

Notifications

webdunia
webdunia
webdunia
webdunia

ಕರ್ನಾಟಕದಲ್ಲಿ 28, 723 ಹೊಸ ಕೋವಿಡ್ ಪ್ರಕರಣ ದಾಖಲು

ಕರ್ನಾಟಕದಲ್ಲಿ 28, 723 ಹೊಸ ಕೋವಿಡ್ ಪ್ರಕರಣ ದಾಖಲು
bangalore , ಶುಕ್ರವಾರ, 14 ಜನವರಿ 2022 (21:03 IST)
ಕರ್ನಾಟಕದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದೆ. 24 ಗಂಟೆಯಲ್ಲಿ 28,723 ಹೊಸ ಪ್ರಕರಣ ದಾಖಲಾಗಿದ್ದು, ಕೋವಿಡ್ ಮಾದರಿಗಳ ಪರೀಕ್ಷೆಯಲ್ಲಿ ರಾಜ್ಯ ಹೊಸ ದಾಖಲೆ ಮಾಡಿದೆ.
 
ಡಾ. ಸುಧಾಕರ್ ಈ ಕುರಿತು ಮಾಹಿತಿ ನೀಡಿದ್ದಾರೆ. ಒಟ್ಟು 2,21,205 ಲಕ್ಷ ಮಾದರಿಗಳ ಪರೀಕ್ಷೆಗಳನ್ನು ಮಾಡಲಾಗಿದೆ. ಕೋವಿಡ್ ಪರಿಸ್ಥಿತಿ ಆರಂಭವಾದ ಬಳಿಕ ಮೊದಲ ಬಾರಿಗೆ ಇಷ್ಟು ಸಂಖ್ಯೆಯ ಪರೀಕ್ಷೆ ಮಾಡಲಾಗಿದೆ.
 
Highest testing since the beginning of pandemic with 2.21 lakh tests today.
◾New cases in State:28,723
◾New cases in B'lore: 20,121
◾Positivity rate in State: 12.98%
◾Discharges: 3,105
◾Active cases State: 1,41,337 (B'lore- 101k)
◾Deaths:14 (B'lore- 07)
◾Tests: 2,21,205
 
ರಾಜ್ಯದಲ್ಲಿ 28,723 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಬೆಂಗಳೂರು ನಗರದಲ್ಲಿ 20,121 ಹೊಸ ಪ್ರಕರಣ ಪತ್ತೆಯಾಗಿದೆ. ರಾಜ್ಯದ ಪಾಸಿಟಿವಿಟಿ ದರ ಶೇ 12.98ಕ್ಕೆ ಏರಿಕೆಯಾಗಿದೆ. ರಾಜ್ಯದ ಸಕ್ರಿಯ ಪ್ರಕರಣಗಳು 1,41,337 ಆಗಿದೆ.
 
ಕೋವಿಡ್ ನಿಯಂತ್ರಣ SOP ಕಟ್ಟು ನಿಟ್ಟು ಜಾರಿಗೆ ಹೈಕೋರ್ಟ್ ನಿರ್ದೇಶನ
 
24 ಗಂಟೆಯಲ್ಲಿ ರಾಜ್ಯದಲ್ಲಿ 3105 ಜನರು ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 14 ಜನರು ಮೃತಪಟ್ಟಿದ್ದು, ಬೆಂಗಳೂರು ನಗರದಲ್ಲಿ 7 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಒಂದು ಲಕ್ಷದ ಗಡಿ ದಾಟಿದೆ.
 
ಕೋವಿಡ್ ಮಾರ್ಗಸೂಚಿ ಯಾವಾಗ ಅಂತ್ಯ?; ಮಾಹಿತಿ ನೀಡಿದ ಆರೋಗ್ಯ ಸಚಿವ
 
ಕರ್ನಾಟಕದ ಕೋವಿಡ್ ವರದಿ; 24 ಗಂಟೆಯಲ್ಲಿ 3105 ಜನರು ಡಿಸ್ಚಾರ್ಜ್‌. ಒಟ್ಟು ಗುಣಮುಖಗೊಂಡವರು 2973470. ದಾಖಲಾದ ಹೊಸ ಪ್ರಕರಣಗಳು 28723. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 141337. ಒಟ್ಟು ಮೃತಪಟ್ಟವರು 14. ಒಟ್ಟು ಮೃತಪಟ್ಟವರು 38411. ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 3153247. ಪಾಸಿಟಿವಿಟಿ ದರ ಶೇ 12.98. ಮರಣ ಪ್ರಮಾಣ ಶೇ 0.04.
 
ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣಗಳು?; ಬೆಂಗಳೂರು ನಗರದಲ್ಲಿ 20121 ಹೊಸ ಪ್ರಕರಣಗಳು ದಾಖಲಾಗಿವೆ. ನಗರದಲ್ಲಿನ ಸಕ್ರಿಯ ಪ್ರಕರಣಗಳು 109312. ಒಟ್ಟು ಪ್ರಕರಣಗಳು 1373452. ಒಟ್ಟು ಮೃತಪಟ್ಟವರು 16443.
 
ಬಾಗಲಕೋಟೆ 49, ಬಳ್ಳಾರಿ 400, ಬೆಳಗಾವಿ 227, ಬೆಂಗಳೂರು ಗ್ರಾಮಾಂತರ 418, ಬೀದರ್ 131, ಚಾಮರಾಜನಗರ 106, ಚಿಕ್ಕಬಳ್ಳಾಪುರ 246, ಚಿಕ್ಕಮಗಳೂರು 174, ಚಿತ್ರದುರ್ಗ 104 ಹೊಸ ಪ್ರಕರಣ ದಾಖಲಾಗಿದೆ.
 
ದಕ್ಷಿಣ ಕನ್ನಡ 639, ದಾವಣಗೆರೆ 187, ಧಾರವಾಡ 338, ಗದಗ 110, ಹಾಸನ 654, ಹಾವೇರಿ 25, ಕಲಬುರಗಿ 338, ಕೊಡಗು 104, ಕೋಲಾರ 502, ಕೊಪ್ಪಳ 49 ಪ್ರಕರಣ ದಾಖಲಾಗಿದೆ.
 
ಮಂಡ್ಯ 554, ಮೈಸೂರು 803, ರಾಯಚೂರು 239, ಶಿವಮೊಗ್ಗ 315, ತುಮಕೂರು 796, ಉಡುಪಿ 497, ಉತ್ತರ ಕನ್ನಡ 301, ವಿಜಯಪುರ 106, ಯಾದಗರಿ 18.

Share this Story:

Follow Webdunia kannada

ಮುಂದಿನ ಸುದ್ದಿ

ಹಬ್ಬದ ಪ್ರಯುಕ್ತ ಮಾರ್ಕೆಟ್ ನಲ್ಲಿ ಜನಜಂಗುಳಿ