Webdunia - Bharat's app for daily news and videos

Install App

ನವಜಾತ ಶಿಶುವನ್ನು ಟಾಯ್ಲೆಟ್ ಗೆ ಹಾಕಿ ಫ್ಲಶ್ ಮಾಡಿದರು: ಶಾಕಿಂಗ್ ಘಟನೆಯ ವಿವರ ಇಲ್ಲಿದೆ

crime
Krishnaveni K
ಗುರುವಾರ, 28 ನವೆಂಬರ್ 2024 (12:56 IST)
ರಾಮನಗರ: ಆಗ ತಾನೇ ಜನಿಸಿದ ಮಗುವನ್ನು ಟಾಯ್ಲೆಟ್ ಗೆ ಹಾಕಿ ಫ್ಲಶ್ ಮಾಡಿದ ಶಾಕಿಂಗ್ ಘಟನೆ ರಾಮನಗರದ ಹಾರೋಹಳ್ಳಿಯ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಈ ಶಾಕಿಂಗ್ ಘಟನೆಯ ವಿವರ ಇಲ್ಲಿದೆ.

ಈ ಅಮಾನವೀಯ ಕೃತ್ಯ ಬಯಲಾಗುತ್ತಿದ್ದಂತೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಕೃತ್ಯವೆಸಗಿರುವುದು ಯಾರು ಎಂಬುದು ಇನ್ನೂ ಬಯಲಾಗಿಲ್ಲ. ಆದರೆ ತಾಯಿಯೇ ಕೃತ್ಯವೆಸಗಿರಬಹುದು ಎಂದು ಸಂಶಯಿಸಲಾಗಿದ್ದು ಆ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ.

ಆಸ್ಪತ್ರೆಯ ನೆಲಮಹಡಿಯ ಶೌಚಾಲಯದಲ್ಲಿ ನೀರು ನಿಂತಿರುವುದನ್ನು ಆಸ್ಪತ್ರೆ ಸಿಬ್ಬಂದಿಗಳು ಗಮನಿಸಿದ್ದಾರೆ. ಏನೋ ಬ್ಲಾಕ್ ಆಗಿರಬಹುದು ಎಂದು ವೈದ್ಯ ಸಿಬ್ಬಂದಿಗಳು ಕ್ಲೀನಿಂಗ್ ಮಾಡುವ ಸಿಬ್ಬಂದಿಗಳಿಗೆ ಶುಚಿಗೊಳಿಸಲು ಸೂಚನೆ ನೀಡಿದ್ದರು. ಈ ವೇಳೆ ಸಿಬ್ಬಂದಿ ವ್ಯಾಕ್ಯೂಮ್ ಕ್ಲೀನರ್ ಬಳಸಿ ಬ್ಲಾಕ್ ಸರಿಪಡಿಸಲು ನೋಡಿದ್ದಾರೆ.

ಆಗ ಏನೋ ವಸ್ತು ತಡೆಯಾಗಿರುವುದು ತಿಳಿದುಬಂದಿದೆ. ಏನೋ ವಸ್ತು ಇರಬಹುದು ಎಂದು ತೆಗೆದು ನೋಡಿದರೆ ಶಿಶುವಿನ ಶವ ನೋಡಿ ಸಿಬ್ಬಂದಿಗಳಿಗೆ ಶಾಕ್ ಆಗಿದೆ. ಮಗು ಜನಿಸಿ ಕೇವಲ ಒಂದು ಅಥವಾ ಎರಡು ದಿನಗಳಾಗಿರಬಹುದಷ್ಟೇ ಎನಿಸುವಂತಿತ್ತು. ತಕ್ಷಣವೇ ವೈದ್ಯ ಸಿಬ್ಬಂದಿಗಳಿಗೆ ಮಾಹಿತಿ ನೀಡಲಾಗಿದೆ. ಆಸ್ಪತ್ರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮಗುವಿನ ಶವವನ್ನು ಅದೇ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಮಗು ಯಾರದ್ದು, ಇದನ್ನು ಇಲ್ಲಿ ಹಾಕಿದವರು ಯಾರು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments