Select Your Language

Notifications

webdunia
webdunia
webdunia
webdunia

ರಕ್ಷಾ ಬಂಧನದ ಕುರಿತು ಹಳೆಯ ಕತೆ ಹೇಳಿದ ಸುಧಾಮೂರ್ತಿಯನ್ನು ಟೀಕಿಸಿದ ನೆಟ್ಟಿಗರು: ಕಾರಣವೇನು ನೋಡಿ

Sudha Murty

Krishnaveni K

ಬೆಂಗಳೂರು , ಸೋಮವಾರ, 19 ಆಗಸ್ಟ್ 2024 (12:29 IST)
ಬೆಂಗಳೂರು: ಸಮಾಜ ಸೇವಕಿ, ಲೇಖಕಿ, ಇನ್ ಫೋಸಿಸ್ ಸಹ ಸಂಸ್ಥಾಪಕಿ ಸುಧಾಮೂರ್ತಿ ಇಂದು ರಕ್ಷಾ ಬಂಧನ ನಿಮಿತ್ತ ಮಾಡಿದ ಪೋಸ್ಟ್ ಒಂದು ಎಲ್ಲರ ಟೀಕೆಗೆ ಗುರಿಯಾಗಿದೆ. ಅಷ್ಟಕ್ಕೂ ಆ ಪೋಸ್ಟ್ ನಲ್ಲಿ ಅಂತಹದ್ದೇನಿತ್ತು ಇಲ್ಲಿದೆ ವಿವರ.

ರಕ್ಷಾ ಬಂಧನ ನಿಮಿತ್ತ ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ಸುಧಾ ಮೂರ್ತಿ ಇದರ ಹಿನ್ನಲೆಯನ್ನು ವಿವರಿಸಿದ್ದರು. ರಕ್ಷಾ ಬಂಧನ ಹಬ್ಬ ಆಚರಣೆ ಜಾರಿಗೆ ಬರಲು ರಾಣಿ ಕರ್ಣಾವತಿ ಅಪಾಯದಲ್ಲಿದ್ದಾಗ ರಾಜ ಹುಮಾಯುನ್ ಗೆ ಸಹೋದರತ್ವದ ರಕ್ಷೆ ಕಳುಹಿಸಿ ತನ್ನನ್ನು ಪಾರು ಮಾಡುವಂತೆ ಕೇಳಿಕೊಂಡಳು. ಅಂದಿನಿಂದ ಈ ರಕ್ಷಾ ಬಂಧನ ಹಬ್ಬ ಆಚರಣೆ ಶುರುವಾಯ್ತು ಎಂದು ಸುಧಾಮೂರ್ತಿ ಹೇಳಿಕೊಂಡಿದ್ದಾರೆ.
  
ಆದರೆ ಸುಧಾಮೂರ್ತಿ ಹೇಳಿರುವ ಈ ಕತೆ ನೆಟ್ಟಿಗರ ಟೀಕೆಗೆ ಗುರಿಯಾಗಿದೆ. ನೀವು ನಿಜವಾಗಿಯೂ ಇತಿಹಾಸ ತಿಳಿದುಕೊಂಡೇ ಮಾತನಾಡುತ್ತಿದ್ದೀರಾ? ಒಂದು ವೇಳೆ ಇದೇ ಕಟ್ಟುಕತೆಯನ್ನೇ ನೀವು ಹೇಳುವುದಾದರೆ ನಾನು ಇನ್ನು ಮುಂದೆ ನಿಮ್ಮ ಪುಸ್ತಕಗಳನ್ನು ಓದುವುದನ್ನೇ ನಿಲ್ಲಿಸುತ್ತೇನೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ನಿಮಗೆ ರಕ್ಷಾ ಬಂಧನದ ಹಿನ್ನಲೆ ನಿಜವಾಗಿ ಅರಿಯಬೇಕಿದ್ದರೆ ಕೃಷ್ಣ ಮತ್ತು ದ್ರೌಪದಿಯ ಕತೆ ತಿಳಿಯಿರಿ. ರಕ್ಷಾ ಬಂಧನ ದ್ವಾಪರಯುಗದಲ್ಲೇ ಆರಂಭವಾಗಿತ್ತು. ನಿಮ್ಮಂತಹ ಚಿಂತಕರು, ಲೇಖಕರು, ಗೌರವ ಹೊಂದಿರುವ ವ್ಯಕ್ತಿಗಳು ಇಂತಹ ಕಟ್ಟು ಕತೆಗಳನ್ನು ಪ್ರಚಾರ ಮಾಡುವುದು ನೋಡಿದರೆ ಅಚ್ಚರಿಯಾಗುತ್ತದೆ ಎಂದು ಇನ್ನು ಕೆಲವರು ಕಾಮೆಂಟ್ ಮಾಡಿ ಟೀಕೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಾಂಕ ವಾದ್ರಾಗಿಂತ ರಾಹುಲ್ ಗಾಂಧಿ ದೊಡ್ಡವರಾ: ರಕ್ಷಾ ಬಂಧನದ ಪೋಸ್ಟ್ ನಲ್ಲಿದೆ ನಿಜಾಂಶ