Webdunia - Bharat's app for daily news and videos

Install App

ಪೊಲೀಸರಿಗೆ ಗೌರವ ಕೊಡೋದು ಹೇಗೆಂದು ಮೋದಿ ನೋಡಿ ಕಲಿಯಿರಿ: ಟ್ರೋಲ್ ಆದ ಸಿದ್ದರಾಮಯ್ಯ

Krishnaveni K
ಸೋಮವಾರ, 11 ಆಗಸ್ಟ್ 2025 (11:29 IST)
Photo Credit: Facebook
ಬೆಂಗಳೂರು: ಖಾಕಿ ಸಮವಸ್ತ್ರ ಧರಿಸಿದ ಪೊಲೀಸರಿಗೆ ಹೇಗೆ ಗೌರವ ಕೊಡಬೇಕೆಂದು ಪ್ರಧಾನಿ ಮೋದಿ ನೋಡಿ ಕಲಿಯಿರಿ ಹೀಗೆಂದು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಸಿಎಂ ಸಿದ್ದರಾಮಯ್ಯಗೆ ಟ್ರೋಲ್ ಮಾಡಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಪ್ರತಿಭಟನಾ ಸಮಾವೇಶದಲ್ಲಿ ಬಿಜೆಪಿ ಪರ ಘೋಷಣೆ ಕೂಗಿದ್ದಕ್ಕೆ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಮೇಲೆ ವೇದಿಕೆಯಲ್ಲೇ ಸಿಎಂ ಸಿದ್ದರಾಮಯ್ಯ ಗರಂ ಆಗಿ ಹೊಡೆಯಲೆಂಬಂತೆ ಕೈ ಎತ್ತಿದ್ದರು. ಈ ವಿಚಾರ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಪೊಲೀಸ್ ಅಧಿಕಾರಿ ನಾರಾಯಣ ಭರಮನಿ ಸ್ವಯಂ ನಿವೃತ್ತಿಗೆ ತೆಗೆದುಕೊಳ್ಳಲೂ ಮುಂದಾಗಿದ್ದರು.

ಇದೀಗ ನಿನ್ನೆ ಪ್ರಧಾನಿ ಮೋದಿ ಹಳದಿ ಲೈನ್ ಮೆಟ್ರೋ ಉದ್ಘಾಟನೆಗೆ ಬೆಂಗಳೂರಿಗೆ ಬಂದಿದ್ದಾರೆ. ಈ ವೇಳೆ ಅವರನ್ನು ಸ್ವಾಗತಿಸಲು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಎಂ.ಎ. ಸಲೀಂ ಕೂಡಾ ಬಂದಿದ್ದರು. ಪ್ರಧಾನಿಗೆ ಅವರು ಸೆಲ್ಯೂಟ್ ಹೊಡೆದು ನಿಂತಿದ್ದರೆ, ಮೋದಿ ಕೈ ಮುಗಿದು ಗೌರವ ಸಲ್ಲಿಸಿದ್ದಾರೆ.

ಈ ಎರಡೂ ಸಂದರ್ಭಗಳ ಫೋಟೋ ಎಡಿಟ್ ಮಾಡಿ ನೆಟ್ಟಿಗರು ಹೇಗೆ ಗೌರವ ಕೊಡಬೇಕೆಂದು ಕಲಿಯಿರಿ ಎಂದು ಟಾಂಗ್ ಕೊಟ್ಟಿದ್ದಾರೆ. ಪೊಲೀಸ್ ಅಧಿಕಾರಿಗಳೆಂದರೆ ಆಡಳಿತ ಮಾಡುವವರ ಅಡಿಯಾಳುಗಳಲ್ಲ. ಈ ಎರಡೂ ಫೋಟೋಗಳಲ್ಲಿರುವ ವ್ಯತ್ಯಾಸವನ್ನು ಜನರು ಗಮನಿಸಬೇಕು ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಕ್ಕರೆ ಖಾಯಿಲೆ ದೂರ ಮಾಡಲು ಈ ಮೂರು ಅಭ್ಯಾಸ ಸಾಕು ಎನ್ನುತ್ತಾರೆ ಡಾ ಸಿಎನ್ ಮಂಜುನಾಥ್

ಎಲ್ಲರ ಬಾಸ್ ಎಂದು ಹೇಳುವವರಿಗೆ ನಮ್ ಕಂಡ್ರೆ ಹೊಟ್ಟೆ ಉರಿ: ಅಮೆರಿಕಾಗೆ ರಾಜನಾಥ್ ಸಿಂಗ್ ಟಾಂಗ್

ಕೆಸಿ ವೇಣುಗೋಪಾಲ್ ಇದ್ದ ಏರ್ ಇಂಡಿಯಾ ವಿಮಾನ ದುರಂತದಿಂದ ಸ್ವಲ್ಪದರಲ್ಲೇ ಪಾರು

ಪ್ರಧಾನಿ ಮೋದಿ ಜೊತೆ ಗುಸು ಗುಸು ಮಾತನಾಡಿದ್ದೇನೆಂದು ಬಹಿರಂಗಪಡಿಸಿದ ಡಿಕೆ ಶಿವಕುಮಾರ್

Karnataka Rains: ಈ ವಾರ ಮಳೆ ಬಗ್ಗೆ ಇಲ್ಲಿದೆ ಮಹತ್ವದ ಅಪ್ ಡೇಟ್

ಮುಂದಿನ ಸುದ್ದಿ
Show comments