ಹಿಮಾಚಲ ಪ್ರದೇಶ ಪ್ರವಾಹಕ್ಕೆ 5 ಕೋಟಿ: ಅಲ್ಲಿ ಕಾಂಗ್ರೆಸ್ ಆಡಳಿತ ಅಂತಾನ ಎಂದು ಸಿದ್ದರಾಮಯ್ಯಗೆ ಕುಟುಕಿದ ನೆಟ್ಟಿಗರು

Krishnaveni K
ಭಾನುವಾರ, 14 ಸೆಪ್ಟಂಬರ್ 2025 (13:29 IST)
ಬೆಂಗಳೂರು: ಹಿಮಾಚಲಪ್ರದೇಶದ ಪ್ರವಾಹ ಪರಿಹಾರ ನಿಧಿಗೆ ರಾಜ್ಯ ಸರ್ಕಾರದ ವತಿಯಿಂದ 5  ಕೋಟಿ ರೂ. ನೆರವು ಘೋಷಿಸಿದ ಸಿಎಂ ಸಿದ್ದರಾಮಯ್ಯಗೆ ನೆಟ್ಟಿಗರು ಕಿಡಿ ಕಾರಿದ್ದಾರೆ. ನಮಗೇ ದುಡ್ಡಿಲ್ಲ, ಇನ್ನು ಬೇರೆಯವರಿಗೆ ಕೊಡ್ತಿದ್ದೀರಿ ಎಂದಿದ್ದಾರೆ.

ಈ ಹಿಂದೆ ಕೇರಳದ ವಯನಾಡು ದುರಂತಕ್ಕೆ ಕರ್ನಾಟಕ ಸರ್ಕಾರ 100 ಮನೆ ನಿರ್ಮಿಸಿ ಕೊಡುವುದಾಗಿ ಘೋಷಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಕೇರಳದ  ವಯನಾಡಿನಲ್ಲಿ ಆನೆ ದುರಂತದಿಂದ ಸಾವಿಗೀಡಾದ ಕುಟುಂಬಕ್ಕೆ ರಾಜ್ಯ ಸರ್ಕಾರ ಪರಿಹಾರ ನೀಡಿತ್ತು. ಇದೆಲ್ಲವೂ ಕಾಂಗ್ರೆಸ್ ಹೈಕಮಾಂಡ್ ಮೆಚ್ಚಿಸಲು ಅವರ ಅಣತಿಯಂತೆ ನೀಡಲಾಗಿದೆ ಎಂದು ಟೀಕೆಗೊಳಗಾಗಿತ್ತು.

ಇದೀಗ ಪಂಜಾಬ್, ಉತ್ತರಾಖಂಡ ಸೇರಿದಂತೆ ದೇಶದ ಹಲವು ಕಡೆ ಪ್ರವಾಹವಾಗಿದೆ. ಹಾಗಿದ್ದರೂ ಕಾಂಗ್ರೆಸ್ ಆಡಳಿತವಿರುವ ಹಿಮಾಚಲಪ್ರದೇಶಕ್ಕೆ ಮಾತ್ರ 5 ಕೋಟಿ ರೂ. ಪರಿಹಾರ ನೀಡಲು ಮುಂದಾಗಿರುವುದಕ್ಕೆ ನೆಟ್ಟಿಗರು ವ್ಯಂಗ್ಯ ಮಾಡಿದ್ದಾರೆ.

ಮನೆಗೆ ಮಾರಿ ಊರಿಗೆ ಉಪಕಾರಿ ಎನ್ನುವುದು ಇದಕ್ಕೇ ಇರಬೇಕು. ಹಾಸನ ದುರಂತದಲ್ಲಿ ಸಾವನ್ನಪ್ಪಿದವರಿಗೆ 10 ಲಕ್ಷ ಕೊಡಲು ದುಡ್ಡಿಲ್ಲ ಅಂತೀರಿ. ಉತ್ತರ ಕರ್ನಾಟಕದ ಪ್ರವಾಹ ನಿಮ್ಮ ಕಣ್ಣಿಗೆ ಕಾಣಿಸಲ್ಲ. ಕಾಂಗ್ರೆಸ್ ಆಡಳಿತವಿರುವ ಬೇರೆ ರಾಜ್ಯಗಳಿಗೆ ಬೇಕಾಬಿಟ್ಟಿ ಕೊಡ್ತಿರಿ ಎಂದು ಕುಟುಕಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಂದಿರಾ ಗಾಂಧಿ ದೇಶದ ಪ್ರೇಮದ, ಧೈರ್ಯದ ಪ್ರತೀಕ: ಡಿಕೆ ಶಿವಕುಮಾರ್

ಪಿಎಂ ಕಿಸಾನ್ ಸಮ್ಮಾನ್ ಯೋಜನೆ 21 ನೇ ಕಂತು ಬಿಡುಗಡೆ: ಇಂದೇ ಖಾತೆ ಚೆಕ್ ಮಾಡಿ

ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನ ಜೀವರಕ್ಷಕ ಔಷಧಿ ಟೆಂಡರ್ ನಲ್ಲಿ ಗೋಲ್ಮಾಲ್: ಸಿ.ಟಿ.ರವಿ

ಇಂದಿರಾ ಗಾಂಧಿ ಪುಸ್ತಕ 100 ರೂ ಕೊಟ್ಟು ತಗೊಂಡು ಹೋಗಿ: ಡಿಕೆ ಶಿವಕುಮಾರ್ ತಾಕೀತು

ಭ್ರಷ್ಟ, ಜನ ವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಹೋರಾಟಕ್ಕೆ ನಿರ್ಧಾರ

ಮುಂದಿನ ಸುದ್ದಿ
Show comments