ನೀಟ್ ಫಲಿತಾಂಶ ಪ್ರಕಟ; ಮಂಗಳೂರಿನ ಜಶನ್ ಛಾಬ್ರಾಗೆ 5ನೇ ರ‍್ಯಾಂಕ್

Webdunia
ಮಂಗಳವಾರ, 2 ನವೆಂಬರ್ 2021 (19:47 IST)
ಮಂಗಳೂರು:- ಇಲ್ಲಿನ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್‌ನ ವಿದ್ಯಾರ್ಥಿ ಜಶನ್ ಛಾಬ್ರಾ 720ರಲ್ಲಿ 715 ಅಂಕ ಪಡೆದು ಅಖಿಲ ಭಾರತ ನೀಟ್ ಪರೀಕ್ಷೆಯಲ್ಲಿ 5ನೇ ರ‍್ಯಾಂಕ್ ಪಡೆದಿದ್ದಾರೆ.
ಅಖಿಲ ಭಾರತ ಮಟ್ಟದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಅವಕಾಶ ನೀಡುವ ನೀಟ್ ಪರೀಕ್ಷೆಯ ಫಲಿಂತಾಶ ಸೋಮವಾರ ರಾತ್ರಿ ಹೊಸದಿಲ್ಲಿಯಲ್ಲಿ ಪ್ರಕಟಿಸಲಾಗಿದೆ.
ತೆಲಂಗಾಣ, ದಿಲ್ಲಿ ಹಾಗೂ ಮಹಾರಾಷ್ಟ್ರದ ತಲಾ ಓರ್ವ ವಿದ್ಯಾರ್ಥಿ 720ರಲ್ಲಿ 720 ಪಡೆದು ಮೊದಲ ಮೂರು ಸ್ಥಾನ ಪಡೆದಿದ್ದಾರೆ. 4ನೆ ಸ್ಥಾನವನ್ನು ಉತ್ತರ ಪ್ರದೇಶದ ವಿದ್ಯಾರ್ಥಿ (716) ಪಡೆದಿದ್ದು, ಮಂಗಳೂರಿನ ಜಶನ್ ಛಾಬ್ರಾ, ಮೈಸೂರಿನ ಪ್ರಮತಿ ಹಿಲ್ ವ್ಯೂವ್ ಅಕಾಡಮಿಯ ವಿದ್ಯಾರ್ಥಿ ಎಚ್.ಕೆ. ಮೇಘನ್ ಸಹಿತ 12 ವಿದ್ಯಾರ್ಥಿಗಳು 715 ಅಂಕ ಪಡೆದು 5ನೆ ರ‍್ಯಾಂಕ್ ಗಳಿಸಿದ್ದಾರೆ.
ಜಶನ್ ಛಾಬ್ರಾ ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯಲ್ಲಿ ಶೇ.97.2 ಪಡೆದು ಕಾಲೇಜಿನಲ್ಲಿ ಪ್ರಥಮ ಸ್ಥಾನ ಗಳಿಸಿದ್ದರು. ನೀಟ್‌ನಲ್ಲಿ 5ನೇ ರ‍್ಯಾಂಕ್ ಪಡೆಯುವ ಮೂಲಕ ಇದೀಗ ದೇಶದ ಅಗ್ರಮಾನ್ಯ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಅವಕಾಶವನ್ನು ಹೊಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇರಳದಲ್ಲಿ ಮೊದಲ ಬಾರಿಗೆ ಗೆಲುವಿಗೆ ಪ್ರಧಾನಿ ಮೋದಿಗೆ ಖುಷಿಯೋ ಖುಷಿ

ಜನವರಿ 6 ಕ್ಕೆ ಡಿಕೆ ಶಿವಕುಮಾರ್ ಸಿಎಂ: ಇಕ್ಬಾಲ್ ಹುಸೇನ್ ಮಾತಿಗೆ ಡಿಕೆಶಿ ಹೇಳಿದ್ದೇನು

ತಿರುವನಂತಪುರಂನಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು

ಕಾಂಗ್ರೆಸ್ಸಿಗೆ ಯತೀಂದ್ರ ಹೈಕಮಾಂಡ್ ಆಗಿದ್ದಾರಾ: ವಿಜಯೇಂದ್ರ

ಡಿಕೆ ಶಿವಕುಮಾರ್ ಸಿಎಂ ಆಗುವ ದಿನಾಂಕ ಫಿಕ್ಸ್: ಸ್ಪೋಟಕ ಹೇಳಿಕೆ ನೀಡಿದ ಆಪ್ತ ಶಾಸಕ

ಮುಂದಿನ ಸುದ್ದಿ
Show comments