Publish Date: Sun, 31 Mar 2019 (12:30 IST)
Updated Date: Tue, 02 Apr 2019 (14:44 IST)
ಚುನಾವಣೆಯಲ್ಲಿ ನರೇಂದ್ರ ಮೋದಿ ಗೆದ್ದು ಮತ್ತೆ ದೇಶದ ಪ್ರಧಾನಿಯಾಗಲಿ ಎಂದು ಅಭಿಮಾನಿಳು ವಿಶೇಷ ಹರಕೆಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ.
ಬೆಳಗಾವಿ ಮೂಲದ ಭಕ್ತರು ಮಂತ್ರಾಲಯದ ರಾಯರ ಸ್ವರ್ಣ ರಥೋತ್ಸವಕ್ಕಾಗಿ 7000 ರೂ. ಪಾವತಿಸಿದ್ದಾರೆ. ಈ ಮೂಲಕ ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿ ಎಂದು ವಿಶೇಷ ಹರಕೆ ಕಟ್ಟಿಕೊಂಡಿದ್ದಾರೆ.
ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು, ಮಂತ್ರಾಲಯದ ಶ್ರೀರಾಘವೇಂದ್ರ ಮಠದಲ್ಲಿ ಬೆಳಗಾವಿ ಮೂಲದ ಭಕ್ತರು ನರೇಂದ್ರ ಮೋದಿ ಹೆಸರಿನಲ್ಲೇ ಸ್ವರ್ಣ ರಥೋತ್ಸವ ಸೇವೆ ಮಾಡಿಸಿದ್ದಾರೆ. ರಥೋತ್ಸವದ ಪಾವತಿ ಹಣ 7000 ರೂ. ಪಾವತಿಸುವ ಮೂಲಕ ನರೇಂದ್ರ ಮೋದಿ ಹೆಸರಿನಲ್ಲೇ ವಿಶೇಷ ಸೇವೆ ಸಲ್ಲಿಸಿದ್ದಾರೆ.
ಬೇಡಿದ ವರವನ್ನ ನೀಡುವ ಕಲಿಯುಗದ ಕಾಮಧೇನು ಎಂದು ಪ್ರಸಿದ್ಧಿ ಪಡೆದಿರುವ ರಾಘವೇಂದ್ರರ ಮಠದಲ್ಲಿ ನೆಲೆಸಿರುವ ರಾಯರಿಗೆ ಸೇವೆ ಸಲ್ಲಿಸಿದರೆ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಮೋದಿ ಹೆಸರಿನಲ್ಲಿರುವ ಸೇವಾ ರಶೀದಿ ಇದೆ.