Webdunia - Bharat's app for daily news and videos

Install App

ಮನ್​ ಕಿ ಬಾತ್​ಗೆ ಜನರ ಸಲಹೆ ಕೇಳಿದ ಮೋದಿ

Webdunia
ಶುಕ್ರವಾರ, 8 ಏಪ್ರಿಲ್ 2022 (16:47 IST)
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನಪ್ರಿಯ ರೇಡಿಯೊ ಕಾರ್ಯಕ್ರಮ ಮನ್​ ಕಿ ಬಾತ್​ಗಾಗಿ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿದ್ದಾರೆ. ಏಪ್ರಿಲ್ 24ರಂದು ಪ್ರಸಾರವಾಗಲಿರುವ ಮನ್​ ಕಿ ಬಾತ್​ನಲ್ಲಿ ಮಾತನಾಡಬಹುದಾದ ವಿಷಯಗಳ ಬಗ್ಗೆ ಜನರು ಸಲಹೆಗಳನ್ನು ನೀಡಬಹುದಾಗಿದೆ. ತಿಂಗಳಿಗೆ ಒಮ್ಮೆ ಪ್ರಸಾರವಾಗುವ ಮನ್ ಕಿ ಬಾತ್ ಕಾರ್ಯಕ್ರಮದ 88ನೇ ಸಂಚಿಕೆ ಏಪ್ರಿಲ್ 24ರಂದು ಪ್ರಸಾರವಾಗಲಿದೆ. ಈ ಬಾರಿಯ ಕಾರ್ಯಕ್ರಮಕ್ಕೆ ತಳಮಟ್ಟದಲ್ಲಿ ಬದಲಾವಣೆಗೆ ದುಡಿಯುತ್ತಿರುವವರು ಹಾಗೂ ಅವಿಶ್ರಾಂತ ಶ್ರಮಿಸುತ್ತಿರುವವರ ಬಗ್ಗೆ ಮೋದಿ ಮಾತನಾಡಿದ್ದಾರೆ. ‘ನಿಮಗೂ ಅಂಥ ಸ್ಫೂರ್ತಿದಾಯಕ ಚೇತನಗಳ ವಿವರ ತಿಳಿದಿದ್ದರೆ ನನ್ನ ಗಮನಕ್ಕೆ ತನ್ನಿ’ ಎಂದು ಮೋದಿ ಕೋರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಮನ್​ ಕಿ ಬಾತ್​ಗಾಗಿ ಮಾಹಿತಿ ನೀಡಲು ಇಚ್ಛಿಸುವವರು ನಮೋ ಆ್ಯಪ್ ಅಥವಾ MyGov ವೆಬ್​ಸೈಟ್ ಮೂಲಕ ತಮ್ಮ ಅನಿಸಿಕೆ ಹಂಚಿಕೊಳ್ಳಬಹುದು. 1800-11-7800 ಟೋಲ್​ಫ್ರೀ ಸಂಖ್ಯೆಗೆ ಕರೆ ಮಾಡಿ ಮೆಸೇಜ್ ರೆಕಾರ್ಡ್ ಮಾಡಬಹುದು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments