Select Your Language

Notifications

webdunia
webdunia
webdunia
webdunia

ನರೇಂದ್ರ ಮೋದಿ ಬರ್ತ್ ಡೇಗೆ ಕಿಟ್ ವಿತರಿಸಿದ ಸಚಿವ

webdunia
ಗುರುವಾರ, 17 ಸೆಪ್ಟಂಬರ್ 2020 (22:00 IST)
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಪ್ರಯುಕ್ತ ಪೌರಕಾರ್ಮಿಕರಿಗೆ ಸಚಿವರೊಬ್ಬರು ದಿನಸಿ ಕಿಟ್ ವಿತರಿಸಿದ್ದಾರೆ.

ಸಚಿವ ಡಾ.ನಾರಾಯಣಗೌಡ ಅವರು ಬೆಂಗಳೂರಿನ ತಮ್ಮ ನಿವಾಸಕ್ಕೆ ಆರ್ ಎಮ್ ವಿ ಬಡಾವಣೆ ವ್ಯಾಪ್ತಿಯ ಪೌರ ಕಾರ್ಮಿಕರನ್ನ ಆಹ್ವಾನಿಸಿ, ದಿನ ಬಳಕೆ ವಸ್ತುಗಳಿರುವ ಕಿಟ್ ನೀಡಿದರು.

ಪೌರಕಾರ್ಮಿಕ, ತೋಟಗಾರಿಕೆ ಹಾಗೂ ರೇಷ್ಮೆ‌ಇಲಾಖೆ ಸಚಿವ ಡಾ. ನಾರಾಯಣಗೌಡ ಮಾತನಾಡಿ,    ವಿಶ್ವದಲ್ಲೆ ಮೊದಲ ಬಾರಿಗೆ ಸಫಾಯಿ ಕರ್ಮಚಾರಿಗಳ ಪಾದ ತೊಳೆದ ಪ್ರಧಾನಿ ನಮ್ಮ ಮೋದಿ. ಸ್ವಚ್ಛತೆಯ ಪರಿಪಾಲಕರು ಎಂದು ಪೌರಕಾರ್ಮಿಕರನ್ನ ಕರೆದು, ಗೌರವಿಸಿದರು.

ಕೊರೊನಾ ವಾರಿಯರ್ಸ್ ಗಳಿಗೆ ಚಪ್ಪಾಳೆ ತಟ್ಟಿ , ದೀಪ ಬೆಳಗಿ, ಹೆಲಿಕಾಪ್ಟರ್ ಮೂಲಕ ಪುಷ್ಪಮಳೆ ಸುರಿಸಿ ಗೌರವಿಸಿರುವ ಪ್ರಧಾನಿ ಮೋದಿಯವರಿಗೆ ಪೌರಕಾರ್ಮಿಕರ ಮೇಲೆ ಇರುವ ಗೌರವವನ್ನ ತೋರಿಸುತ್ತದೆ ಎಂದರು.

 

Share this Story:

Follow Webdunia Hindi

ಮುಂದಿನ ಸುದ್ದಿ

ಡ್ರಗ್ಸ್ ದಂಧೆ : ಹೆಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್