ಬೆಂಗಳೂರು: ನಿರೀಕ್ಷೆಯಂತೇ ನಂದಿನಿ ಹಾಲಿನ ದರ ಏರಿಕೆಯಾಗಿದೆ. ಬರೋಬ್ಬರಿ 4 ರೂ. ಏರಿಕೆ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ಇದು ಜನರಿಗೂ ನಿಜಕ್ಕೂ ಶಾಕ್ ಆಗಿದೆ.
ಪ್ರತೀ ಲೀಟರ್ ನಂದಿನಿ ಹಾಲಿಗೆ 4 ರೂ. ಏರಿಕೆ ಮಾಡಲು ಕ್ಯಾಬಿನೆಟ್ ಅನುಮೋದನೆ ಸಿಕ್ಕಿದೆ. ಕಳೆದ ಕೆಲವು ದಿನಗಳಿಂದ ನಂದಿನಿ ಹಾಲಿನ ದರ ಏರಿಕೆ ಕುರಿತು ಪ್ರಸ್ತಾವನೆಗಳಿತ್ತು. ಕೆಎಂಎಫ್ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
ಆದರೆ ಬಜೆಟ್ ಮುಗಿಯುವರೆಗೂ ಹೆಚ್ಚಳ ಬೇಡ ಎಂದು ಸಿಎಂ ಮುಂದೂಡಿದ್ದರು. ಇದೀಗ ಬಜೆಟ್ ಮುಗಿದ ಬಳಿಕ ಮತ್ತೊಮ್ಮೆ ಸಿಎಂ ಹಾಲು ಒಕ್ಕೂಟಗಳೊಂದಿಗೆ ಸಭೆ ನಡೆಸಿದ್ದರು. ಇದೀಗ ಕ್ಯಾಬಿನೆಟ್ ಅನುಮೋದನೆ ನೀಡಲಾಗಿದೆ.
ಇದರೊಂದಿಗೆ ನಂದಿನಿ ಹಾಲಿನ ದರ ಮತ್ತೆ 4 ರೂ. ಏರಿಕೆಯಾಗಲಿದೆ. ಕಳೆದ ಜೂನ್ ನಲ್ಲಷ್ಟೇ ನಂದಿನಿ ಹಾಲಿನ ದರ 2 ರೂ. ಏರಿಕೆಯಾಗಿತ್ತು. ಈಗ ಮತ್ತೊಮ್ಮೆ ದರ ಏರಿಕೆ ಮಾಡಲಾಗಿದೆ. ಈಗಾಗಲೇ ಹಲವು ಬೆಲೆ ಏರಿಕೆಗಳ ನಡುವೆ ಜನತೆಗೆ ಇದು ಮತ್ತೊಂದು ಬರೆ ಬಿದ್ದಂತಾಗಿದೆ.