ಅತ್ತ ಕೇಂದ್ರ ಜಿಎಸ್ ಟಿ ಕಡಿಮೆ ಮಾಡಿದರೆ ಇತ್ತ ಬೆಂಗಳೂರಿನಲ್ಲಿ ನಂದಿನಿ ಹಾಲು ದರ ಏರಿಕೆ ಬರೆ

Krishnaveni K
ಬುಧವಾರ, 24 ಸೆಪ್ಟಂಬರ್ 2025 (09:40 IST)
ನವದೆಹಲಿ: ಅತ್ತ ಕೇಂದ್ರ ಸರ್ಕಾರ ಜಿಎಸ್ ಟಿ ಕಡಿಮೆ ಮಾಡಿ ದಿನನಿತ್ಯದ ಬಳಕೆ ವಸ್ತುಗಳ ಬೆಲೆ ಕಡಿಮೆಯಾಗಿದ್ದರೆ ಇತ್ತ ಬೆಂಗಳೂರಿನಲ್ಲಿ ನಂದಿನಿ ದೇಸೀ ಹಾಲಿನ ದರವನ್ನು ಭಾರೀ ಏರಿಕೆ ಮಾಡಿ ಬರೆ ಹಾಕಲಾಗಿದೆ.

ಕೇಂದ್ರ ಸರ್ಕಾರ ಜಿಎಸ್ ಟಿ ಕಡಿತಗೊಳಿಸಿರುವುದರಿಂದ ಹಲವು ನಂದಿನಿ ಉತ್ಪನ್ನಗಳ ಬೆಲೆಯೂ ಕಡಿಮೆಯಾಗಿತ್ತು. ನಂದಿನಿ ತುಪ್ಪ, ಚೀಸ್, ತಿನಿಸುಗಳ ಮೇಲಿನ ಜಿಎಸ್ ಟಿ ಕಡಿತವಾಗಿ 10-20 ರೂ.ಗಳಷ್ಟು ಬೆಲೆ ಕಡಿಮೆಯಾಗಿತ್ತು.

ಆದರೆ ಜನರು ಈ ಖುಷಿಯಲ್ಲಿರುವಾಗಲೇ ನಂದಿನಿ ದೇಸೀ ಹಾಲಿನ ದರವನ್ನು ಬರೋಬ್ಬರಿ 40 ರೂ. ಏರಿಕೆ ಮಾಡಲಾಗಿದೆ. ಬೆಂಗಳೂರು ಸಹಕಾರ ಹಾಲು ಒಕ್ಕೂಟ ದೇಸೀ ಹಾಲಿನ ದರವನ್ನು ಏರಿಕೆ ಮಾಡಿದ್ದು ಈಗ ಪ್ರತೀ ಲೀಟರ್ ಗೆ 120 ರೂ.ಗಳಾಗಿವೆ.

ಈ ಮೊದಲು ದೇಸೀ ಹಾಲಿನ ದರ ಪ್ರತೀ ಲೀ.ಗೆ 80 ರೂ.ಗಳಷ್ಟಿತ್ತು. ಆದರೆ ಈಗ ಏಕಾಏಕಿ 40 ರೂ. ಏರಿಕೆ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಈ ದರ ಏರಿಕೆ ಬಮೂಲ್ ಗೆ ಮಾತ್ರ ಸೀಮಿತವಾಗಿರಲಿದೆ. ಈ ಹಾಲಿನ ದರ ಏರಿಕೆ ಲಾಭವನ್ನು ರೈತರಿಗೆ ನೀಡಲಾಗುವುದು ಎಂದು ಬಮೂಲ್ ಸಮಜಾಯಿಷಿ ನೀಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೆಂಗಳೂರಿನಲ್ಲಿ ತಾವೇ ರಸ್ತೆ ಗುಂಡಿ ಮುಚ್ಚಲು ಮುಂದಾದ ಬಿಜೆಪಿ ಶಾಸಕರು

ಉಕ್ರೇನ್ ಯುದ್ಧಕ್ಕೆ ರಷ್ಯಾಗೆ ಭಾರತ, ಚೀನಾ ಹಣ ಸಹಾಯ ಮಾಡ್ತಿದೆ: ಟ್ರಂಪ್ ಅದ್ಯಾಕೆ ಹಿಂಗಾಡ್ತಾರೋ

Karnataka Weather: ಇಂದು ಮಳೆ ಅಬ್ಬರ ಕಡಿಮೆ ಆದರೂ ಇಲ್ಲಿದೆ ಟ್ವಿಸ್ಟ್

ಈಗ ಓಡಿ ಮಹೇಶಣ್ಣ ಓಡಿ ಎಂದು ಕಾಲೆಳೆದ ಕಿರಿಕ್ ಕೀರ್ತಿ

ಮುಂದಿನ ಸುದ್ದಿ
Show comments