Namma Metro: ತಾಯಂದಿರೇ ಗಮನಿಸಿ, ನಮ್ಮ ಮೆಟ್ರೋ ನಿಲ್ದಾಣದಲ್ಲಿ ಇನ್ನು ಈ ಸೌಲಭ್ಯವಿರಲಿದೆ

Krishnaveni K
ಶನಿವಾರ, 7 ಜೂನ್ 2025 (13:13 IST)
ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವ ತಾಯಂದಿರು ಇನ್ನು ಈ ಒಂದು ವಿಚಾರಕ್ಕೆ ಚಿಂತೆಪಡಬೇಕಾಗಿಲ್ಲ. ಎಸ್ ಬಿಐ ಬ್ಯಾಂಕ್ ಸಹಯೋದೊಂದಿಗೆ ಮೆಟ್ರೋ ನಿಲ್ದಾಣದಲ್ಲಿ ಹೊಸ ಸೌಲಭ್ಯ ಲಭ್ಯವಾಗಲಿದೆ.

ನಮ್ಮ ಮೆಟ್ರೋದಲ್ಲಿ ನಿತ್ಯ ಸಾಕಷ್ಟು ಜನ ಚಿಕ್ಕಮಕ್ಕಳನ್ನು ಕರೆದುಕೊಂಡು ಹೋಗುವ ತಾಯಂದಿರುತ್ತಾರೆ. ಮೊಲೆಯುಣಿಸುವ ಮಕ್ಕಳನ್ನು ಕರೆದುಕೊಂಡು ಪ್ರಯಾಣ ಮಾಡುವಾಗ ತಾಯಂದಿರಿಗೆ ಕಷ್ಟವಾಗಬಾರದು ಎಂಬ ಕಾರಣಕ್ಕೆ ಮೆಟ್ರೋದಲ್ಲಿ ಇನ್ನು ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಚೈಲ್ಡ್ ಹೆಲ್ಪ್ ಫೌಂಡೇಷನ್ ಸಹಯೋಗದೊಂದಿಗೆ ಇನ್ನು ಮುಂದೆ ಮೆಟ್ರೋ ನಿಲ್ದಾಣಗಳಲ್ಲಿ ತಾಯಂದಿರಿಗೆ ಹಾಲುಣಿಸಲು ಸಹಾಯವಾಗುವ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಈಗ ಪ್ರಾಯೋಗಿಕವಾಗಿ ಮೂರು ಕಡೆ ಈ ಕೇಂದ್ರಗಳನ್ನು ಆರಂಭಿಸಲಾಗಿದೆ.

ಬನಶಂಕರಿ ಮೆಟ್ರೋ ಸ್ಟೇಷನ್, ಆರ್ ವಿ ರೋಡ್ ಮೆಟ್ರೋ ಸ್ಟೇಷನ್, ಬೆನ್ನಿಗಾನ ಹಳ್ಳಿ ಮೆಟ್ರೋ ಸ್ಟೇಷನ್ ನಲ್ಲಿ ಸದ್ಯಕ್ಕೆ ಈ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕೇಂದ್ರಗಳನ್ನು ಸ್ಥಾಪಿಸುವ ಯೋಜನೆಯಿದೆ. ಇದರಿಂದ ಸಾಕಷ್ಟು ತಾಯಂದಿರಿಗೆ ಸಹಾಯವಾಗುವ ನಿರೀಕ್ಷೆಯಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾಗ್ಯವತಿ ಅಗ್ಗಿಮಠ ಸಾವು ಪ್ರಕರಣ: ಕಾಂಗ್ರೆಸ್‌ನ ಆರನೇ ಗ್ಯಾರಂಟಿ ಆತ್ಮಹತ್ಯೆ ಭಾಗ್ಯ

ಬಿಜೆಪಿ ಸರ್ಕಾರದಲ್ಲಿ ದಲಿತರು ಸುರಕ್ಷಿತವಲ್ಲ: ಪ್ರಿಯಾಂಕಾ ಗಾಂಧಿ ಕಿಡಿ

ಕೇರಳ ಶಾಲೆಯಲ್ಲಿ ಹಿಜಾಬ್ ಗದ್ದಲ: ನಿಲುವು ಬದಲಾಯಿಸಿದ ವಿದ್ಯಾರ್ಥಿನಿಯ ಪೋಷಕರು

ಹಮಾಸ್‌ನಲ್ಲಿ ಒತ್ತೆಯಾಳಾಗಿದ್ದ ನೇಪಾಳ ವಿದ್ಯಾರ್ಥಿ ಬಿಪಿನ್ ಸಾವು

ಪ್ರತಿಭೆ ಯಾರ ಸ್ವತ್ತೂ ಅಲ್ಲ ಎನ್ನುವುದಕ್ಕೆ ರಾಮಾಯಣ, ಮಹಾಭಾರತವೇ ಸಾಕ್ಷಿ: ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments