ಏಕಾಂತ ಬಯಸಿ ಕಾಡಿಗೆ ಬಂದಿದ್ದ ಪ್ರೇಮಿಗಳ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಕ್ಯಾತಸಂದ್ರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಬೆಂಗಳೂರಿನ ಅತ್ತಿಬೆಲೆಯ ರಾಕೇಶ (22), ಅನ್ಸರ್‌ಪಾಷ (21) ಹಾಗೂ ತುಮಕೂರಿನ ಹೆಗ್ಗೆರೆಯ ಗಿರೀಶ (19), ಅಂಜನಮೂರ್ತಿ(21) ಹಾಗೂ ನಿತಿನ್ (18) ಎಂದು ಗುರುತಿಸಲಾಗಿದೆ.
ತುಮಕೂರಿನ ದೇವರಾಯನದುರ್ಗದ ಬಳಿ ಇರುವ ನಾಮ ಚಿಲುಮೆ ಕಾಡಿಗೆ ಬಂದಿದ್ದ ಪ್ರೇಮಿಗಳನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು ಅವರ ಮೇಲೆ ಮಾರಕವಾಗಿ ಹಲ್ಲೆ ನಡೆಸಿ ಹಣ, ಒಡವೆ ಕಿತ್ತುಕೊಂಡು ಪರಾರಿಯಾಗಿದ್ದರು.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪ್ರೇಮಿ ಮಂಜುನಾಥ್ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಆರೋಪಿಗಳಾದ ರಾಕೇಶ, ಅನ್ಸರ್ ಪಾಷ ಮೇಲೆ ಈ ಹಿಂದೆ ಕೂಡ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.