ಸಂಪುಟ ಪುನಾರಚನೆ ಸಂದರ್ಭದಲ್ಲಿ ನನ್ನ ಅನುಭವ ಅರ್ಹತೆ ನೋಡಿ ಸಚಿವ ಸ್ಥಾನ ನೀಡದಿದ್ರೆ ಮುಂದಿನ ವಿಚಾರ ಮಾಡಬೇಕಾಗುತ್ತದೆ ಎಂದು ವಿಧಾನಪರಿಷತ್ ಸದಸ್ಯ ರಘು ಆಚಾರ್ ಸಿಎಂ ಸಿದ್ದರಾಮಯ್ಯಗೆ ನೇರ ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಧಾರಕ್ಕಾಗಿ ಕಾಯುತ್ತೇನೆ. ನಂತರ ವರಿಷ್ಠರನ್ನು ಭೇಟಿ ಮಾಡಿ ನನ್ನ ಮನದ ಬಯಕೆಯನ್ನು ತಿಳಿಸುತ್ತೇನೆ ಕೊನೆಗೂ ನನಗೆ ಸಚಿವ ಸ್ಥಾನ ನೀಡದಿದ್ರೆ ಜನರ ಬಳಿ ಹೋಗಿ ಜನರ ಅಭಿಪ್ರಾಯದಂತೆ ನಡೆದುಕೊಳ್ಳುತ್ತೇನೆ ಎಂದು ಪಕ್ಷ ಬಿಡುವ ಬಗ್ಗೆ ಪರೋಕ್ಷ ವಾರ್ನಿಂಗ್ ನೀಡಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನ ತೀರ್ಪು ಅಂತಿಮವಾಗಿದ್ದರಿಂದ ಮತದಾರನ ಅಭಿಪ್ರಾಯ ಪಡೆದು ಮುಂದಿನ ರಾಜಕೀಯ ನಿರ್ಧಾರಗಳನ್ನು ಕೈಗೊಳ್ಳುತ್ತೇನೆ ಎಂದು ರಘು ಆಚಾರ್ ತಿಳಿಸಿದ್ದಾರೆ.
ಸಚಿವ ಸಂಪುಟ ಪುನಾರಚನೆ ಸಂದರ್ಭದಲ್ಲಿ ಕೆಲ ಸಚಿವರಿಗೆ ಎಲ್ಲಿ ತಮ್ಮ ಸ್ಥಾನ ಹೋಗುವುದೋ ಎನ್ನುವ ಆತಂಕ ಆವರಿಸಿದ್ದರೆ, ಕೆಲ ಶಾಸಕರಿಗೆ ಕೊನೆಯ ಎರಡು ವರ್ಷವಾದರೂ ಸಚಿವರಾಗುವ ಯೋಗ ದೊರೆಯಲಿ ಎಂದು ಹರಸಾಹಸ ಪಡುತ್ತಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.