Publish Date: Sat, 19 Mar 2022 (15:29 IST)
Updated Date: Sat, 19 Mar 2022 (18:40 IST)
ಬ್ಯಾಗ್‌ನಲ್ಲಿ ಗನ್ ಇಟ್ಟು ಹೆದರಿಸಿ ಸುಲಿಗೆ ಮಾಡುತ್ತಿದ್ದ ಆರೊ ⁇ ಪಿಗಳನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ. ರಾಜಾ ಅಲಿ, ನಾದಿರ್ ಜೈಬಿ ಹಾಗೂ ವಿಕಾಸ್ ಪಾಟೀಲ್ ಬಂಧಿತರು. ಸಬ್ಇನ್ಸ್ ಪೆಕ್ಟರ್ ಮಲ್ಲಿಕಾರ್ಜುನ ನೇತೃತ್ವದಲ್ಲಿ ನೇಟೋರಿಯಸ್ ತಂಡವನ್ನು ಬಂಧಿಸಲಾಗಿದೆ.
ರಾಜಾಜಿನಗರದ ಚೇತನ್ ಎಂಬುವವರು ಚಿನ್ನದ ಕುಸುರಿ ಅಂಗಡಿಯನ್ನು ನಡೆಸುತ್ತಿದ್ದರು. ತಯಾರಾದ ಆಭರಣಗಳಿಗೆ ನಗರತ್ ಪೇಟೆಯಲ್ಲಿ ಹಾಲ್ ಮಾರ್ಕ್ಸ್ ಹಾಕಿಸಲಾಯಿತು. ಅದೇ ರೀತಿ ಫೆಬ್ರವರಿ 12ರಂದು ಹಾಲ್ ಮಾರ್ಕ್ಸ್ ಹಾಕಿಸಿಕೊಂಡು ಬರುವಂತೆ ಪ್ರಭುರಾಮ್ ಎಂಬುವವರಿಗೆ ಚಿನ್ನಾಭರಣ ಕೊಟ್ಟು ಕಳುಹಿಸಿದ್ದರು.
ಪ್ರಭುರಾಮ್ ಚಿನ್ನಾಭರಣ ಬೈಕ್ ನಲ್ಲಿ ನಗರತ್ ಪೇಟೆಗೆ ತೆರಳಿದ್ದರು. ಈ ವೇಳೆ ಪ್ರಭುರಾಮ್ ಅವರಿಗೆ ಸುಲಿಗೆ ಗ್ಯಾಂಗ್ ಅಡ್ಡಗಟ್ಟಿದೆ. ಆರೋಪಿ ನಾದಿರ್ ಜೈಬಿ ತಾನೊಬ್ಬ ದೈವಭಕ್ತ ಅಂತ ಮಾತನಾಡಿಸೋಕೆ ಮುಂದಾಗಿದ್ದ. ನಂತರ ಆರೋಪಿ ರಾಮ್ ಏಕಾಏಕಿ ಪ್ರಭು ಬಳಿ ಬಂದು ಬ್ಯಾಗಲ್ಲಿ ಗನ್ ಇದೆಯೆಂದು ಹೆದರಿಸಿ, ಚೀಲದಲ್ಲಿ ಆಭರಣ ನೀಡುವಂತೆ ಬೆದರಿಕೆ ಹಾಕಿದ್ದಾನೆ. ಹೀಗೆ ಚಿನ್ನಾಭರಣ ಹೊತ್ತೊಯ್ದಿದ್ದ ತಂಡವನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.