ಬೆಂಗಳೂರು ಯುವತಿ ಮೇಲೆ ಆ್ಯಸಿಡ್ ದಾಳಿ ಮಾಡಿದ್ದ ಆರೋಪಿ ನಾಗೇಶ್, ಕೃತ್ಯ ಎಸಗುವ ಮೊದಲು ಹೊಸ ಸಿಮ್ ಖರೀದಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ..ಮಾಗಡಿ ರಸ್ತೆಯ ಬ್ಯಾಡರಹಳ್ಳಿಯಲ್ಲಿ ಹೊಸ ಸಿಮ್ ಖರೀದಿಸಿದ್ದಾನೆ. ಆರೋಪಿ ಕಾಲ್ ಡೀಟೈಲ್ಸ್ ಹುಡುಕಾಡಿದಾಗ ಸಿಮ್ ಖರೀದಿ ಮಾಡಿರುವುದು ಪತ್ತೆಯಾಗಿದೆ. ಹಳೆಯ ಮೊಬೈಲ್ನ್ನು ಹೊಸಕೋಟೆ ಬಳಿ ಎಸೆದು ಹೋಗಿದ್ದಾನೆ..ಪರಾರಿಯಾಗಿರುವ ನಾಗೇಶ್ ಇನ್ನೂ ಹೊಸ ಸಿಮ್ ಆಕ್ಟಿವೇಟ್ ಮಾಡಿಕೊಂಡಿಲ್ಲ..ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿದಾಗ ಆರೋಪಿ ಆ್ಯಸಿಡ್ ದಾಳಿ ಬಗ್ಗೆ ಮೊದಲೇ ಪ್ಲ್ಯಾನ್ ಮಾಡಿದ್ದ ಎಂದು ತಿಳಿಯುತ್ತದೆ.