Select Your Language

Notifications

webdunia
webdunia
webdunia
webdunia

ಪರಮೇಶ್ವರ್ ವಿರುದ್ಧ .ಎನ್.ರಾಜಣ್ಣ ಏಕವಚನದಲ್ಲಿ ವಾಗ್ದಾಳಿ

ಪರಮೇಶ್ವರ್ ವಿರುದ್ಧ .ಎನ್.ರಾಜಣ್ಣ ಏಕವಚನದಲ್ಲಿ ವಾಗ್ದಾಳಿ
ತುಮಕೂರು , ಸೋಮವಾರ, 16 ಡಿಸೆಂಬರ್ 2019 (10:38 IST)
ತುಮಕೂರು : ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ವಿರುದ್ಧ ಕಾಂಗ್ರೆಸ್ ನ ಮಾಜಿ ಶಾಸಕ ಕೆ.ಎನ್.ರಾಜಣ್ಣ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.



ಕೊರಟಗೆರೆ ತಾಲೂಕಿನ ಎಲೆರಾಂಪುರದಲ್ಲಿ ನಡೆದ ಡಿಸಿಸಿ ಬ್ಯಾಂಕ್ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪರಮೇಶ್ವರ್ ಡಿಸಿಎಂ ಹುದ್ದೆ ಏರಿದರು. ಝೀರೋ ಟ್ರಾಫಿಕ್ ಮಂತ್ರಿಯಾದರು. ಆದರೆ ಈಗ ಪರಿಸ್ಥಿತಿ ಹೇಗಾಗಿದೆ ಎಂದರೆ ಹಿಂದೂ ಇಲ್ಲ, ಮುಂದೂ ಇಲ್ಲ ನೊಣ ಹೊಡೆಯೋರು ಗತಿಯಿಲ್ಲ ಎಂದು ಪರಮೇಶ್ವರ್ ವಿರುದ್ಧ ವ್ಯಂಗ್ಯವಾಡಿದ್ದಾರೆ.


ಪರಮೇಶ್ವರ್ ಗೆ ಚುನಾವಣೆಯಲ್ಲಿ ಗೆಲ್ಲಲು ನಾನು ಸಹಾಯ ಮಾಡಿದ್ದೆ. ಗೆದ್ದ ಆತ ಹಿಂದೂ ಮುಂದು ಪೊಲೀಸರನ್ನು  ಇಟ್ಟುಕೊಂಡ. ಆದರೆ ಉಪಕಾರ ಸ್ಮರಣೆ ಇಲ್ಲದ ಆತ ನನ್ನನ್ನೇ ಅಧಿಕಾರದಿಂದ ತೆಗೆಯಲು ಪ್ರಯತ್ನಪಟ್ಟ. ನಾನು ಎಷ್ಟು ಸಹಾಯ ಮಾಡಿದರೂ ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಮಾಡಿದ್ದ. ಈಗ ಆತನ ಅಧಿಕಾರವೇ ಹೋಗಿದೆ ಎಂದು ಏಕವಚನದಲ್ಲಿ ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಡಳಿತ ವೆಚ್ಚದಲ್ಲಿ ಮಿತವ್ಯಯಕ್ಕೆ ಮುಂದಾದ ರಾಜ್ಯ ಸರ್ಕಾರ