Publish Date: Thu, 14 Oct 2021 (10:31 IST)
Updated Date: Thu, 14 Oct 2021 (10:34 IST)
ಮೈಸೂರು: ವಿಶ್ವಿವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಇಂದು ಆಯುಧ ಪೂಜೆ ಸಾಂಪ್ರದಾಯಿಕವಾಗಿ ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಕೊರೋನಾ ಕಾರಣದಿಂದ ಈ ಬಾರಿ ಸರಳವಾಗಿ ದಸರಾ ಉತ್ಸವ ಆಚರಣೆಯಾಗುತ್ತಿದ್ದರೂ, ಸಾಂಪ್ರಾಯಿಕವಾಗಿ ಆಚರಿಸಲಾಗುತ್ತಿದೆ. ಇಂದು ಬೆಳಿಗ್ಗಿನ ಜಾವದಿಂದಲೇ ಕಾರ್ಯಕ್ರಮ ಆರಂಭವಾಗಿದೆ.
ಮಹಾರಾಜರ ಆಯುಧಗಳನ್ನು ಸೋಮೇಶ್ವರ ದೇಗಲುಕ್ಕೆ ಕರೆತರಲಾಗಿದೆ. ಇದೀಗ ಆನೆಗಳ ಮೇಲೆ ಯುದ್ಧ ಸಲಕರಣೆಗಳನ್ನು ತರಲಾಗಿದ್ದು, ಇವುಗಳಿಗೂ ಪೂಜೆ ನೆರವೇರಲಿದೆ. 11 ಗಂಟೆಯ ಬಳಿಕದ ಶುಭ ಮುಹೂರ್ತದಲ್ಲಿ ಆಯುಧ ಪೂಜೆ ನೆರವೇರಲಿದೆ.