Select Your Language

Notifications

webdunia
webdunia
webdunia
webdunia

ಮೈಸೂರು ದಸರಾ: ಜನಮನಸೂರೆಗೊಂಡ ತ್ರಿಭಾಷಾ ವಚನ ಗಾಯನ

ಮೈಸೂರು ದಸರಾ: ಜನಮನಸೂರೆಗೊಂಡ ತ್ರಿಭಾಷಾ ವಚನ ಗಾಯನ
ಮೈಸೂರು , ಗುರುವಾರ, 18 ಅಕ್ಟೋಬರ್ 2018 (15:30 IST)
ಜಗತ್ ಪ್ರಸಿದ್ಧ ಮೈಸೂರು ದಸರಾ ಉತ್ಸವದ ಅಂಗವಾಗಿ ಕಲಾಮಂದಿರದಲ್ಲಿ  ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತ್ರಿಭಾಷಾ ವಚನ ಗಾಯನ ಎಲ್ಲರ ಗಮನ ಸೆಳೆಯಿತು.

      ಕಲಬುರಗಿಯ ಜಿ.ಚಂದ್ರಕಾಂತ್ ಅವರ ತ್ರಿಭಾಷಾ ವಚನ ಗಾಯನ ಮೈಸೂರು ದಸರಾದಲ್ಲಿ ಗಮನ ಸೆಳೆಯಿತು.  ಬಸವಣ್ಣನವರ ವಚನಗಳನ್ನು ಕನ್ನಡ, ಹಿಂದಿ ಮತ್ತು ಇಂಗ್ಲೀಷ್  ಭಾಷೆಗಳಲ್ಲಿ ಹಾಡುವ ಮೂಲಕ ಎಲ್ಲರ ಮನಸೂರೆಗೊಂಡರು. ಪ್ರಾರಂಭದಲ್ಲಿ " ಉಳ್ಳವರು ಶಿವಾಲಯ ಮಾಡುವರು......" ವಚನವನ್ನು ಮಧುವಂತಿ ರಾಗದಲ್ಲಿ ಸುಮಧುರವಾಗಿ ಹಾಡಿದರು.

ನಂತರ ಕಲಾವತಿ ರಾಗದಲ್ಲಿ "ನಾದಪ್ರಿಯ ಶಿವನೆಂಬುವರು...", ಬಿಲಾಸಖಾನಿ ತೋಡಿ ರಾಗದಲ್ಲಿ "ಸ್ವಾಮಿ ನೀನು ಶಾಶ್ವತ ನೀನು....", ಜೀವನಪುರಿ ರಾಗದಲ್ಲಿ "ಕಳಬೇಡ ಕೊಲಬೇಡ....." ವಚನಗಳನ್ನು ಸುಮಧುರವಾಗಿ ಹಾಡಿದರು. ಭೈರವ ರಾಗದಲ್ಲಿ "ಪಾಪಿಯಧನ ಪ್ರಾಯಶ್ಚಿತ್ತಕಲ್ಲದೆ...." ವಚನ ಗಾಯನದ ಮೂಲಕ ಕಾರ್ಯಕ್ರಮ ಕೊನೆಗೊಳಿಸಿದರು.

         ತ್ರಿಭಾಷಾ ವಚನ ಗಾಯನ ಕಾರ್ಯಕ್ರಮಕ್ಕೆ ಗುರುಶಾಂತಯ್ಯ ಸ್ಥಾವರಮಠ ಹಾರ್ಮೊನಿಯಂ ಸಾಥ್ ಹಾಗೂ ವೀರಭದ್ರಯ್ಯ ಸ್ಥಾವರಮಠ ತಬಲಾ ಸಾಥ್ ನೀಡಿದರು. ಜಿಎಸ್‍ಎಸ್ ನಿವೃತ್ತ ಪ್ರಾಚಾರ್ಯ ಪ್ರೊ. ರಾಮಮೂರ್ತಿರಾವ    ಕಾರ್ಯಕ್ರಮ ನಿರೂಪಿಸಿದರು. ವೇದಿಕೆ ಅಧಿಕಾರಿ  ಕುಮಾರಸ್ವಾಮಿ ಹಾಜರಿದ್ದರು.




Share this Story:

Follow Webdunia kannada

ಮುಂದಿನ ಸುದ್ದಿ

ಬಿಸಿಲುನಗರಿಯಲ್ಲಿ ಆಯುಧ ಪೂಜೆ ಸಂಭ್ರಮ