Daily Horoscope

Select Your Language

Notifications

webdunia
webdunia
webdunia
webdunia

'ನನ್ನ ಸುದ್ದಿಯನ್ನು ಡಸ್ಟ್ ಬಿನ್ ಗೆ ಹಾಕಲಾಗುತ್ತಿದೆ' ಕುಮಾರಸ್ವಾಮಿ ಹೀಗ್ಯಾಕೆ ಹೇಳಿದ್ರು ಗೊತ್ತಾ...?

ಬಾಗಲಕೋಟೆ
ಬಾಗಲಕೋಟೆ : ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಸಂದರ್ಶನವೇ ಬೇಡ ಎಂದು ಬಾಗಲಕೋಟೆಯಲ್ಲಿ ಸೋಮವಾರ(ಇಂದು) ಮಾಧ್ಯಮಗಳಿಗೆ ಕೈ ಮುಗಿದಿದ್ದಾರೆ.


ಜೆಡಿಎಸ್ ಪಕ್ಷದ ವರದಿಯನ್ನು ಪ್ರಸಾರ ಮಾಡದಿದ್ದಕ್ಕೆ ಮಾಧ್ಯಮಗಳ ವಿರುದ್ದ ತೀವ್ರ ಬೇಸರ ವ್ಯಕ್ತಪಡಿಸಿದ ಅವರು ‘ ಎಲೆಕ್ಟ್ರಾನಿಕ್ ಮೀಡಿಯಾಗಳು ನಮ್ಮ ಪಕ್ಷದ ವರದಿಯನ್ನು ಬಿತ್ತರಿಸುತ್ತಿಲ್ಲ. ನನ್ನ ಸುದ್ದಿಯನ್ನು ಡಸ್ಟ್ ಬಿನ್ ಗೆ ಹಾಕಲಾಗುತ್ತಿದೆ. ಬಿಜೆಪಿ, ಕಾಂಗ್ರೆಸ್ ಬಗ್ಗೆ ಮಾತ್ರ ಸುದ್ದಿಪ್ರಸಾರ ಮಾಡಲಾಗ್ತಿದೆ. ಆದರೆ ಜೆಡಿಎಸ್ ಪಕ್ಷದ ಬಗ್ಗೆ ಸುದ್ದಿ ಪ್ರಸಾರ ಮಾಡುವುದೇ ಇಲ್ಲ. ಹೀಗಾಗಿ ನಾನೇಕೆ ನನ್ನ ಟೈಮ್ ವೇಸ್ಟ್ ಮಾಡಕೊಳ್ಳಲಿ. ದಯಮಾಡಿ ಕೈ ಮುಗಿಯುತ್ತೇನೆ, ನನ್ನ ಬಲವಂತ ಮಾಡಬೇಡಿ. ನಾನು ಈಗಾಗಲೇ ಮಾಜಿ ಸಿಎಂ ಆಗಿ ಹೋಗಿದ್ದೇನೆ. ಎಲ್ಲಾ ಸುದ್ದಿ ವಾಹಿನಿಗಳು ಈ ರೀತಿ ಮಾಡುತ್ತಿರುವುದು ಬೇಸರ ತರಿಸಿದೆ’ ಎಂದು ಬಾಗಲಕೋಟೆಯಲ್ಲಿ ಇಂದು ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವೋಟಿನ ರಾಜಕೀಯ, ದೇವರ ರಾಜಕೀಯ ನಮಗೆ ಬೇಡ - ನಟ ಪ್ರಕಾಶ್ ರೈ