ಹೆಣ್ಣು ಮಕ್ಕಳ ಮುಂದೆ ನೀರು ಎರಚಿದ ಅಂತ ಅಣ್ಣನನ್ನೇ ಕೊಂದ ತಮ್ಮ!

Webdunia
ಗುರುವಾರ, 16 ಜೂನ್ 2022 (20:56 IST)
ಮನೆ ಹೆಣ್ಣುಮಕ್ಕಳು ಬಟ್ಟೆ ತೊಳೆಯುವಾಗ ನೀರು ಎರಚಿದ ವಿಚಾರಕ್ಕೆ ಅಣ್ಣನನ್ನೇ ತಮ್ಮ ಕೊಲೆ ಮಾಡಿದ ಆಘಾತಕಾರಿ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಜಕ್ಕಲದಿನ್ನಿ ಗ್ರಾಮದಲ್ಲಿ ನಡೆದಿದೆ.
ಬಸವರಾಜ್ ಕೋಟೆ (50) ಕೊಲೆಯಾಗಿರುವ ವ್ಯಕ್ತಿ. ಆರೋಪಿ ಶರಣಪ್ಪ ಸಂಬಂಧದಲ್ಲಿ ಸಹೋದರನಾಗಬೇಕು. ಮನೆ ಹೆಣ್ಣುಮಕ್ಕಳು ಬಟ್ಟೆ ತೊಳೆಯುವಾಗ ನೀರು ಎರಚಿದ ವಿಚಾರಕ್ಕೆ ಜಗಳ ಶುರುವಾಗಿ ಮಾತಿನ ಚಕಮಕಿ ನಡೆದಿದೆ. ಈ ವಾಗ್ವಾದ ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವಾಗಿದೆ. 
ಈ ಇಬ್ಬರು ರಾಜಿ ಸಂಧಾನವಾದ ಮೇಲು ಕ್ಯಾತೆ ತೆಗೆದು ಜಗಳ ಮಾಡಿಕೊಂಡಿದ್ದರು. ನಿನ್ನೆ ಸಂಜೆ ಪುನಃ ಸಂಧಾನಕ್ಕೆ ಕರೆದು ಆರೋಪಿ ಶರಣಪ್ಪ ಹಾಗೂ ಆತನ ಕಡೆಯವರು ಅಟ್ಟಾಡಿಸಿಕೊಂಡು ಹೊಡೆದು ಕೊಲೆ ಮಾಡಿದ್ದಾರೆ ಅಂತ ಆರೋಪಿಸಲಾಗಿದೆ. 
ಗ್ರಾಮದಲ್ಲಿ ಮರ್ಯಾದಸ್ಥ ಕುಟುಂಬಗಳು ಎನ್ನುವ ಹೆಸರಿದ್ದರೂ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ಕೊಲೆ ಹಂತಕ್ಕೆ ಹೋಗಿದ್ದಾರೆ. ಘಟನೆ ಹಿನ್ನೆಲೆ ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಾನವ ಹಕ್ಕು ಉಲ್ಲಂಘನೆ ಸಾಬೀತು: ಬಾಂಗ್ಲಾ ಪದಚ್ಯುತ ಪ್ರಧಾನಿ ಶೇಖ್ ಹಸೀನಾಗೆ ಗಲ್ಲುಶಿಕ್ಷೆ ಪ್ರಕಟ

ಸೌದಿಯಲ್ಲಿ ಭೀಕರ ಅಪಘಾತ: ಮೆಕ್ಕಾ–ಮೇದಿನಾ ಯಾತ್ರೆಗೆ ತೆರಳಿದ್ದ ತೆಲಂಗಾಣದ 45 ಮಂದಿ ಸಜೀವ ದಹನ

ಪಿಎಂ ಕಿಸಾನ್ ಯೋಜನೆಯ 21 ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ್: ಖಾತೆ ಚೆಕ್ ಮಾಡಿಕೊಳ್ಳಿ

ಬೆಂಗಳೂರಿನಿಂದ ಮಂಗಳೂರಿಗೆ ಹಗಲು ಸಂಚರಿಸುವ ರೈಲ್ವೇ ಪ್ರಯಾಣಿಕರಿಗೆ ಗುಡ್ ನ್ಯೂಸ್

ಡಿಕೆ ಶಿವಕುಮಾರ್, ಸಿದ್ದರಾಮಯ್ಯನವರಿಗೆ ದೆಹಲಿಗೆ ಹೋಗಿ ಕೂರುವ ಘನಂದಾರಿ ಕೆಲಸ ಏನಿದೆ: ಆರ್ ಅಶೋಕ್

ಮುಂದಿನ ಸುದ್ದಿ
Show comments