Publish Date: Tue, 04 Jun 2019 (13:33 IST)
Updated Date: Tue, 04 Jun 2019 (13:37 IST)
ಬೆಂಗಳೂರು: ನಾನು ನನ್ನ ಬಾಯ್ ಫ್ರೆಂಡ್ ಅನ್ನು ಒಂದು ಡೇಟಿಂಗ್ ಆ್ಯಪ್ ಮೂಲಕ ಭೇಟಿಯಾದ್ವಿ. ಕಳೆದ ಏಳು ತಿಂಗಳಿಂದ ನಾವಿಬ್ಬರೂ ರಿಲೆಷನ್ ಶಿಫ್ ನಲ್ಲಿ ಇದ್ದೇವೆ. ಒಂದು ದಿನ ಅವನನ್ನು ಮದುವೆಯಾಗಬೇಕು ಎಂಬ ಆಸೆ ನನಗಿದೆ. ಆದರೆ ಅವನಿಗೆ ಡೇಟಿಂಗ್ ಆ್ಯಪ್ ಮೇಲೆ ಆಸಕ್ತಿ ಜಾಸ್ತಿ. ಅಪರಿಚಿತರೊಂದಿಗೆ ಮಾತಾಡುವುದು ಅವನಿಗೆ ತುಂಬಾ ಇಷ್ಟವಂತೆ. ಏನು ಮಾಡಲಿ ಎಂದು ನನಗೆ ಗೊತ್ತಾಗುತ್ತಿಲ್ಲ.
ಇತ್ತೀಚಿನ ದಿನಗಳಲ್ಲಿ ಈ ಡೇಟಿಂಗ್ ಆ್ಯಪ್ ಅನ್ನು ಎಲ್ಲರೂ ಉಪಯೋಗಿಸುತ್ತಿದ್ದಾರೆ. ಕೆಲವರು ಕ್ಯಾಶುವಲ್ ಡೇಟಿಂಗ್ ಗಾಗಿಯೂ ಉಪಯೋಗಿಸುತ್ತಾರೆ. ಇನ್ನು ಕೆಲವರು ತಮ್ಮ ಸಂಗಾತಿಯನ್ನು ಹುಡುಕುವುದಕ್ಕಾಗಿಯೇ ಕೂಡ ಇದನ್ನು ಬಳಸುತ್ತಿದ್ದಾರೆ. ಇಲ್ಲಿ ನಿಮಗೆ ಅಸುರಕ್ಷಿತ ಭಾವನೆ ಕಾಡುತ್ತಿದೆ. ನಿಮ್ಮ ಗೆಳೆಯನ ಜತೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ. ಜತೆಗೆ ಪರಸ್ಪರ ಒಬ್ಬರ ಮೇಲೆ ಒಬ್ಬರು ನಂಬಿಕೆ ಇಟ್ಟುಕೊಳ್ಳಿ. ಇದರಿಂದ ನಿಮ್ಮಿಬ್ಬರ ಭಾಂದವ್ಯ ಗಟ್ಟಿಯಾಗುತ್ತದೆ.