Daily Horoscope

Select Your Language

Notifications

webdunia
webdunia
webdunia
webdunia

ಧರ್ಮಸ್ಥಳ ಅಪಖ್ಯಾತಿ ತರುವಲ್ಲಿ ಭಾಗಿ: ಪ್ರಕಾಶ್ ರಾಜ್‌ ವಿರುದ್ಧ ಕ್ರಮಕ್ಕೆ ಮುತಾಲಿಕ್ ಒತ್ತಾಯ

Mutalik
ಬೆಳಗಾವಿ: ಹಿಂದೂ ಧಾರ್ಮಿಕ ತಾಣ ಧರ್ಮಸ್ಥಳಕ್ಕೆ ಅಪಖ್ಯಾತಿ ತರುವ ಪಿತೂರಿಯಲ್ಲಿ ಬಹುಭಾಷಾ ನಟ ಪ್ರಕಾಶ್‌ ರಾಜ್ ಕೂಡ ಭಾಗಿಯಾಗಿದ್ದಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಪ್ರೇರಣೆ ನೀಡಿದರು. 

ತಲೆಬುರುಡೆ ಪ್ರಕರಣದಲ್ಲಿ ಆರೋಪಿಯಾಗಿರುವ ಚಿನ್ನಯ್ಯ ಅವರು, ಈ ನಟನನ್ನು ಪ್ರಕರಣದ ಸಂಚುಕೋರ ಎಂದು ಹೆಸರಿಸಿದ್ದಾರೆ. ಹಾಗಾಗಿ ಎಸ್‌ಐಟಿಯವರು ಪ್ರಕಾಶ್ ರಾಜ್ ಅವರನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಬೇಕೆಂದು ಆಗ್ರಹ ಮಾಡಿದರು. 

ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ್ದಕ್ಕಾಗಿ ಪೊಲೀಸರು ಪ್ರಕಾಶ್‌ ರಾಜ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕೆಂದು ಒತ್ತಾಯ ಮಾಡಿದರು. 

ಇನ್ನೂ ಕಾಂಗ್ರೆಸ್ ನಾಯಕರು, ಎಡಪಂಥೀಯರು, ಬುದ್ಧಿಜೀವಿಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಒಂದು ಭಾಗವು ಹಿಂದೂ ಧರ್ಮಕ್ಕೆ ಅಪಖ್ಯಾತಿ ತರುವ ಪಿತೂರಿಯಲ್ಲಿ ಭಾಗಿವಾಗಿದೆ ಎಂದರು. 

ಧರ್ಮಸ್ಥಳದ ಹೆಸರು ಕೆಡಿಸುವ ಉದ್ದೇಶದಿಂದ ಈ ಪ್ರಕರಣದಲ್ಲಿ ಸುಜಾತಾ ಭಟ್ ಅವರನ್ನು ದಾಳವಾಗಿ ಬಳಸಿಕೊಳ್ಳಲಾಯಿತು. ಅಸ್ತಿತ್ವದಲ್ಲೇ ಇರದ ಅನನ್ಯಾ ಭಟ್‌ ಅಪಹರಿಸಿ ಕೊಲೆ ಮಾಡಲಾಗಿದೆ ಎಂದು ಗಂಭೀರವಾಗಿ ಆರೋಪಿಸಲಾಯಿತು. ಈ ಸಂಚು ರೂಪಿಸಲು ಪ್ರಕಾಶ್ ರಾಜ್ ಅವರಿಗೆ ಕೇರಳದಿಂದ ₹200 ಕೋಟಿ ಹರಿದುಬಂದಿದೆ ಎಂದು ದೂರಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಶಾಲೆ ಶುರುವಾಗಿ ಹತ್ತೇ ದಿನಕ್ಕೆ ಹಾಸ್ಟೇಲ್‌ನಲ್ಲಿ ಮಗುವಿಗೆ ಜನ್ಮಕೊಟ್ಟ 9ನೇ ತರಗತಿ ವಿದ್ಯಾರ್ಥಿನಿ