Daily Horoscope

Select Your Language

Notifications

webdunia
webdunia
webdunia
webdunia

ಧರ್ಮಸ್ಥಳ ಪ್ರಕರಣದಲ್ಲಿ ಪ್ರಕಾಶ್ ರಾಜ್ ಹೆಸರು ಥಳುಕು: ಅವರು ಕ್ರಿಮಿನಲ್ ಅಲ್ಲ ಗೃಹಸಚಿವ

Priyank Kharge
ಬೆಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ನನಗೆ ಮಟ್ಟೆಣ್ಣನವರ್ ಮತ್ತು ಗ್ಯಾಂಗ್ ಹೇಳಿದಂತೆ ಕೇಳು ಎಂದು ನಟ ಪ್ರಕಾಶ್ ರಾಜ್ ಹೆಸರು ಹೇಳಿದ್ದರು ಎಂದು ಚಿನ್ನಯ್ಯ ನೀಡಿರುವ ಹೇಳಿಕೆಗೆ ಗೃಹಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಪ್ರಕಾಶ್ ರಾಜ್ ತಮಗೆ ತಮಿಳಿನಲ್ಲಿ ಕರೆ ಮಾಡಿ ಅವರು ಹೇಳಿದಂತೆ ಕೊಡು ನಿನ್ನನ್ನು ಅಪ್ಪಿಕೊಳ್ಳುತ್ತೇನೆ ಎಂದಿದ್ದರು ಎಂದು ಚಿನ್ನಯ್ಯ ಕೋರ್ಟ್ ಗೆ ಸಲ್ಲಿಸಿದ್ದ ರಿಟ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ. ನನ್ನನ್ನು ಮಾತ್ರ ಜೈಲಿಗೆ ಕಳುಹಿಸಿದ್ದೀರಿ, ನನ್ನ ಹಿಂದೆ ಷಡ್ಯಂತ್ರ ಮಾಡಿದವರನ್ನು ಯಾಕೆ ಸುಮ್ಮನೆ ಬಿಡಲಾಗಿದೆ ಎಂದು ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಈಗ ಗೃಹಸಚಿವ ಪ್ರಿಯಾಂಕ್ ಖರ್ಗೆಗೆ ಮಾಧ್ಯಮಗಳು ಪ್ರಶ್ನೆ ಮಾಡಿದಾಗ ಅವರು ಸಮರ್ಥಿಸಿಕೊಂಡಿದ್ದಾರೆ. ‘ಪ್ರಕಾಶ್ ರಾಜ್ ಹೆಸರು ಥಳುಕು ಹಾಕಿಕೊಂಡಿದೆ ಎಂಬ ಮಾತ್ರಕ್ಕೆ ಅವರು ಕ್ರಿಮಿನಲ್ ಅಲ್ಲ. ಕೋರ್ಟ್ ಈಗಾಗಲೇ ಈ ಬಗ್ಗೆ ಎಸ್ಐಟಿ ಚೀಫ್ ಗೆ ವರದಿ ಕೇಳಿದೆ. ಅವರು ಕೋರ್ಟ್ ಗೆ ಉತ್ತರ ಕೊಡುತ್ತಾರೆ. ಈ ಬಗ್ಗೆ ಮಾದ್ಯಮಗಳಲ್ಲಿ ಚರ್ಚೆ ಮಾಡಕ್ಕೆ ಆಗಲ್ಲ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Arecanut Price: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ