Select Your Language

Notifications

webdunia
webdunia
webdunia
webdunia

ಮಸೀದಿಗಳಲ್ಲಿ ಇರುವವರ ಫುಲ್ ಡೀಟೈಲ್ಸ್ ಕೊಡಲೇಬೇಕು!

ಮಸೀದಿಗಳಲ್ಲಿ ಇರುವವರ ಫುಲ್ ಡೀಟೈಲ್ಸ್ ಕೊಡಲೇಬೇಕು!
ತುಮಕೂರು , ಮಂಗಳವಾರ, 28 ಏಪ್ರಿಲ್ 2020 (18:18 IST)
ಬೇರೆ ಜಿಲ್ಲೆ ಹಾಗೂ ರಾಜ್ಯ ಹಾಗೂ ವಿದೇಶಗಳಿಂದ ಜಮಾತ್ ಸದಸ್ಯರು ಮಸೀದಿಗಳಲ್ಲಿ ತಂಗಿರುವುದು ಕಂಡು ಬಂದಿದ್ದು, ಈ ಕೂಡಲೇ ಅವರ ಡೀಟೈಲ್ಸ್ ಕೊಡಬೇಕು.

ವಿಶ್ವದಲ್ಲಿ ಹರಡುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಸುಮಾರು ಷರತ್ತುಗಳನ್ನು ಒಳಪಡಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ತಿಳಿಸಲಾಗಿದೆ. ತುಮಕೂರು ನಗರದ 10 ಮಸೀದಿಗಳಲ್ಲಿ ಬೇರೆ ಜಿಲ್ಲೆ, ರಾಜ್ಯ ಮತ್ತು ವಿದೇಶದಿಂದ ಜಮಾತ್ ಸದಸ್ಯರು ತಂಗಿರುವುದು ಕಂಡು ಬಂದಿದೆ.

ಈಗಾಗಲೇ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿರುವ ಮಸೀದಿಗಳನ್ನು ಹೊರತುಪಡಿಸಿ ಇನ್ನಿತರೆ ಮಸೀದಿಗಳಲ್ಲಿ ಜಮಾತ್ ಸದಸ್ಯರು ತಂಗಿದ್ದಲ್ಲಿ ಕೂಡಲೇ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಸಹಕರಿಸುವಂತೆ ಜಿಲ್ಲಾ ವಕ್ಫ್ ಅಧಿಕಾರಿಗಳು ವಿವಿಧ ಮಸೀದಿಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಲ್ಲಿ ಮನವಿ ಮಾಡಿದ್ದಾರೆ.

ಈ ರೋಗ ಹರಡದಂತೆ ಸರ್ಕಾರದೊಂದಿಗೆ ಎಲ್ಲರೂ ಕೈಜೋಡಿಸಬೇಕು. ತಪ್ಪಿದಲ್ಲಿ ಮುಂದಿನ ಆಗು-ಹೋಗುಗಳಿಗೆ ಸಂಬಂಧಪಟ್ಟ ಮಸೀದಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರನ್ನು ನೇರ ಹೊಣೆಗಾರರನ್ನಾಗಿ ಪರಿಗಣಿಸಿ ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ವರದಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾನಿಟೈಸರ್ ಖರೀದಿಯಲ್ಲಿ ಭಾರೀ ಭ್ರಷ್ಟಾಚಾರ? ಹೆಚ್ಡಿಕೆ ಹೇಳಿದ್ದೇನು?