Select Your Language

Notifications

webdunia
webdunia
webdunia
Sunday, 13 April 2025
webdunia

ಶಾಸಕ ಮುನಿರತ್ನ ವಿರುದ್ಧ ಕಾಂಗ್ರೆಸ್ ಆಕ್ರೋಶ

bangalore
bangalore , ಶನಿವಾರ, 10 ಜುಲೈ 2021 (18:34 IST)
ಕೋವಿಡ್ ಬೆಡ್ ಬ್ಲಾಕಿಂಗ್ ಆಯ್ತು.. ಈಗ ವ್ಯಾಕ್ಸಿನ್ ದಂಧೆಯೂ ಶುರುವಾದಂತಿದೆ. ಬೆಂಗಳೂರಿನಲ್ಲಿ ವ್ಯಾಕ್ಸಿನ್ ಗಾಗಿ ಜನ ಪರದಾಡ್ತಿದ್ರೆ ಬಿಜೆಪಿ ನಾಯಕರು  ತಮಗೆ ಬೇಕಾದವರಿಗೆ ಟೋಕನ್ ಕೊಟ್ಟು ವ್ಯಾಕ್ಸಿನ್ ಹಾಕಿಸುತ್ತಿದ್ದಾರೆ.. ಬಿಜೆಪಿ ಶಾಸಕ ಮುನಿರತ್ನ ಅವ್ರು ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ವ್ಯಾಕ್ಸಿನ್ ಟೋಕನ್ ಹಂಚಿಕೆ ಮಾಡಿದ್ದಾರೆ. ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್ ಖಾಲಿ ಅಂತಾ ಬೋರ್ಡ್ ಗಳನ್ನ ಹಾಕಿದ್ದಾರೆ.ಆದ್ರೆ ಬಿಜೆಪಿ ನಾಯಕರಿಗೆ ಮಾತ್ರ ಲಸಿಕೆ ಹೇಗೆ ಸಿಗ್ತಿದೆ ಅಂತಾ ಕಾಂಗ್ರೆಸ್ ಟ್ವಿಟ್ ಮಾಡಿ ಕಿಡಿ ಕಾರಿದೆ. ಶಾಸಕ ಮುನಿರತ್ನ ಮತದಾರರಿಗೆ ಲಸಿಕೆ ಆಮಿಷ ಒಡ್ಡುತ್ತಿದ್ದಾರೆ. ವ್ಯಾಕ್ಸಿನ್ ಬ್ಲಾಕಿಂಗ್ ಬಗ್ಗೆ ತನಿಖೆ ಆಗಬೇಕು ಅಂತಾ ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಲಿಕೆ ವ್ಯಾಪ್ತಿಯ ಪಾದಚಾರಿ ಮಾರ್ಗಗಳಲ್ಲಿ ಕಟ್ಟಡದ ಅವಶೇಷಗಳನ್ನು ಹಾಕಿದವರಿಗೆ ಅಧಿಕಾರಿಗಳಿಂದ ದಂಡಾಸ್ತ್ರ....