Webdunia - Bharat's app for daily news and videos

Install App

ಮುಧೋಳ ನಗರ ಬಂದ್

Webdunia
ಬುಧವಾರ, 16 ನವೆಂಬರ್ 2022 (17:17 IST)
ಕಬ್ಬಿಗೆ ಸೂಕ್ತ ಬೆಲೆ ನಿರ್ಣಯಕ್ಕಾಗಿ ಕರೆದ ಸಂಧಾನ ಸಭೆ ವಿಫಲ ಹಿನ್ನೆಲೆ ಇಂದು ಕರ್ನಾಟಕ ರಾಜ್ಯ ರೈತ ಸಂಘದಿಂದ ಬಾಗಲಕೋಟೆ ಜಿಲ್ಲೆ ಮುಧೋಳ ನಗರವನ್ನ ಬಂದ್‌ ಮಾಡಲಾಗಿದೆ. ಕರ್ನಾಟಕ ರಾಜ್ಯ ರೈತ ಸಂಘ ಬಾಗಲಕೋಟೆ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ ಈ ಬಂದ್​​​ಗೆ ಕರೆ ನೀಡಿದ್ರು. ಇಂದು ಮುಧೋಳ ನಗರ ಬಂದ್ ಸಂದರ್ಭದಲ್ಲಿ ಅಂಗಡಿ ಮುಂಗಟ್ಟು ವ್ಯಾಪಾರ ವಹಿವಾಟು ಬಂದ್ ಆಗಿದ್ದು, ಸಾರಿಗೆ ಸಂಚಾರದಲ್ಲಿಯೂ ವ್ಯತ್ಯಯವಾಗಿದೆ. ವಾಸ್ತವವಾಗಿ, ನಿನ್ನೆ ಕಬ್ಬಿಗೆ ಸೂಕ್ತ ಬೆಲೆಗಾಗಿ ರೈತರು, ಕಾರ್ಖಾನೆ ಆಡಳಿತ ಮಂಡಳಿ ಸಭೆ ಕರೆದಿತ್ತು. ಸಕ್ಕರೆ ಸಚಿವ ಶಂಕರಪಾಟಿಲ್ ಮುನೇನಕೊಪ್ಪ, ಬಾಗಲಕೋಟೆ ಉಸ್ತುವಾರಿ ಸಚಿವ ಸಿಸಿ ಪಾಟೀಲ್, ಸಚಿವ ಗೋವಿಂದ ಕಾರಜೋಳ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ರೈತರು ಟನ್ ಕಬ್ಬಿಗೆ 2900 ರೂ. ಬೆಲೆ ಕೇಳಿದ್ದರು. ಆದರೆ, ಕಾರ್ಖಾನೆ ಆಡಳಿತ ಮಂಡಳಿ 2800 ರೂ. ಮಾತ್ರ ಬೆಲೆ ನಿಗದಿ ಮಾಡುವುದಾಗಿ ಪಟ್ಟು ಹಿಡಿದಿತ್ತು. ಹೀಗಾಗಿ ಸಭೆಯಲ್ಲಿ ರೈತರು ಹಾಗೂ ಕಾರ್ಖಾನೆ ಆಡಳಿತ ಮಂಡಳಿ ಮಧ್ಯೆ ಸಂಧಾನ ವಿಫಲವಾದ ಹಿನ್ನಲೆಯಲ್ಲಿ ಬಂದ್​​​ಗೆ ಕರೆ ನೀಡಲಾಗಿತ್ತು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಈಡೇರದ 5G ನೆಟ್‌ವರ್ಕ್ ಬೇಡಿಕೆ, ಗ್ರಾಮಕ್ಕೆ ಬಂದ ಜಿಯೋ ಉದ್ಯೋಗಿಯನ್ನು ಗ್ರಾಮಸ್ಥರು ಏನ್ ಮಾಡಿದ್ರು ನೋಡಿ, Video

ಮೂರು ವರ್ಷದ ಹಿಂದೆಯೇ BRICSಗೆ ಸೇರಲು ಪಾಕ್ ಅರ್ಜಿ ಸಲ್ಲಿಸಿದ್ದರು ಸಿಗದ ಸದಸ್ಯತ್ವ, ಯಾಕೆ ಗೊತ್ತಾ

ಸಾಲು ಸಾಲು ರಜೆಗೆ ಊರಿನತ್ತ ಜನ, ಇಡೀ ಬೆಂಗಳೂರೇ ಖಾಲಿಯಾದ ಹಾಗಿದೆ, Video

Karnataka Weather: ಉರಿಬಿಸಿಲಿಗೆ ಸುಸ್ತಾಗಿದ್ದ ಜನತೆ ಯಾವಾಗ ಮಳೆ ನಿರೀಕ್ಷಿಸಬಹುದು

BRICS: ಒಟ್ಟಾಗಿ ಹೆಜ್ಜೆ ಹಾಕಿದ ಪ್ರಧಾನಿ ಮೋದಿ, ಪುಟಿನ್, ಪೆಜೆಶ್ಕಿಯನ್

ಮುಂದಿನ ಸುದ್ದಿ
Show comments