Webdunia - Bharat's app for daily news and videos

Install App

ಮುಡಾ ಹಗರಣ: ಸಿಎಂ ಪತ್ನಿ ವಾಪಾಸ್ ಮಾಡಿದ್ದ 14 ಮುಡಾ ನಿವೇಶನಗಳ ಖಾತೆ ರದ್ದು

Sampriya
ಮಂಗಳವಾರ, 1 ಅಕ್ಟೋಬರ್ 2024 (18:56 IST)
Photo Courtesy X
ಮೈಸೂರು: ರಾಜ್ಯ ರಾಜಕೀಯದಲ್ಲಿ ಮುಡಾ ಹಗರಣ ಸಂಬಂದ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯ ಬೆನ್ನಲ್ಲೇ ಅವರ ಪತ್ನಿ ಸೈಟ್ ವಾಪಾಸ್ ನೀಡಿ ಅಚ್ಚರಿ ಮೂಡಿಸಿದ್ದಾರೆ.   ತಮಗೆ ನೀಡಿದ್ದ ಒಟ್ಟು 14ನಿವೇಶನಗಳನ್ನು ವಾಪಾಸ್ ನೀಡಿದ್ದ ಬೆನ್ನಲ್ಲೇ ಇದೀಗ ಆ 14 ನಿವೇಶನಗಳ ಖಾತೆ ರದ್ದಾಗಿದೆ.

 ಖುದ್ದು ಸಿಎಂ ಪತ್ನಿ ಪಾರ್ವತಿ ಅವರೇ ಇಂದು(ಅಕ್ಟೋಬರ್ 01) ಮೈಸೂರಿನ ಉಪನೋಂದಣಿ ಕಚೇರಿಗೆ ತೆರಳಿ ತಮಗೆ ಮಂಜೂರಾಗಿದ್ದ ಒಟ್ಟು 14 ಮುಡಾ ನಿವೇಶನಗಳ ಖಾತೆ ರದ್ದು ಮಾಡಿಸಿದ್ದಾರೆ. ಈ ಬಗ್ಗೆ ಮುಡಾ ಆಯುಕ್ತರಾದ ರಘುನಂದನ್ ಪ್ರತಿಕ್ರಿಯಿಸಿ,  14 ಸೈಟ್​ಗಳು ಮುಡಾಗೆ ವಾಪಸ್​ ಆಗಿದ್ದು, ಈಗ 14 ಸೈಟ್​ಗಳ ಕ್ರಯಪತ್ರ ರದ್ದಾಗಿದೆ. ಪಾರ್ವತಿ ಅವರು ಸ್ವಇಚ್ಛೆಯಿಂದ ಬಂದು ಕೊಟ್ಟಿದ್ದಕ್ಕೆ ನಾವು ಸ್ವೀಕರಿಸಿದ್ದೇವೆ. ಇದನ್ನ ಸರ್ಕಾರದ ಗಮನಕ್ಕೆ ತಂದಿದ್ದೇವೆ ಎಂದು ವಿವರಿಸಿದರು.

ಪಾರ್ವತಮ್ಮ ಸಿದ್ದರಾಮಯ್ಯ ಅವರ ಈಗ ಸ್ವ ಇಚ್ಛೆಯಿಂದ ಸೈಟ್ ವಾಪಸ್ಸು ಕೊಟ್ಟಿದ್ದಾರೆ. ಕಾನೂನು ಪರಿಗಣಿಸಿ ನಾವು ಪಾರ್ವತಮ್ಮ ಅವರ ಹೆಸರಿನಲ್ಲಿ ಇದ್ದ 14 ಸೈಟ್ ಗಳ ಸೆಲ್ ಡೀಡ್ ರದ್ದು ಮಾಡಿದ್ದೇವೆ‌. ಈಗ 14 ನಿವೇಶನ ಮೂಡಾ ವ್ಯಾಪ್ತಿಗೆ ಬಂದಿವೆ, ಈ ಸೈಟ್ ಗಳನ್ನು ಬೇರೆಯವರಿಗೆ ಹಂಚಬಹುದಾ ಅಥವಾ ತನಿಖೆ ಮುಗಿಯುವವರೆಗೂ ಅದನ್ನು ಹಂಚಬಾರದು ಎಂಬ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತೇವೆ ಎಂದು ಹೇಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

West Bengal: ಪೋಷಕರನ್ನು ಕೊಂದು ಅನಾಥಶ್ರಮದಲ್ಲಿನ ಇಬ್ಬರು ಶಿಕ್ಷಕರನ್ನು ಕೊಂದ ವ್ಯಕ್ತಿ

Liberian ಹಡಗು ದುರಂತ: ಇದೊಂದು ವಿಪತ್ತು ಎಂದ ಕೇರಳ ಸರ್ಕಾರ

ಬೆಂಗಳೂರು ಮಳೆಯ ಅವಘಡದಿಂದ ಎಚ್ಚೆತ್ತ ಡಿಸಿಎಂ ಶಿವಕುಮಾರ್‌ರಿಂದ ದಿಟ್ಟ ನಿರ್ಧಾರ

Bantwal Abdul Rahim Case: ಬಂಧಿತರಿಂದ ಇನ್ನಷ್ಟು ಮಂದಿಯ ಹೆಸರು ಬಯಲು

ಕನಸಿನಂತೆ ಮೂರು ತಿಂಗಳ ಹಿಂದೆ ಸೇನೆ ಸೇರಿದ ಯೋಧ ಹಠಾತ್ ಹೃದಯಾಘಾತದಲ್ಲಿ ಸಾವು

ಮುಂದಿನ ಸುದ್ದಿ
Show comments