ಎಂಟಿಬಿ ನಾಗರಾಜ್ ಹೇಳಿಕೆಯ ವಿಡಿಯೋ ವೈರಲ್ ವಿಚಾರವಾಗಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೊದಲು ಸಚಿವ ಎಂಟಿಬಿ ನಾಗರಾಜ್ರನ್ನ ವಿಚಾರಣೆಗೊಳಪಡಿಸಬೇಕು. ನೇಮಕಾತಿ, ವರ್ಗಾವಣೆಗೆ ಹಣ ಪಡೆಯುವುದು ಸರಿಯಾದ ಕ್ರಮವಲ್ಲ. ನಾನೂ ಕೂಡ ಗೃಹ ಸಚಿವನಾಗಿದ್ದೆ. ನಾನಿದ್ದಾಗ ಒಂದೇ ಒಂದು ಆರೋಪ ಬಂದಿರಲಿಲ್ಲ. ಸಚಿವರೂ ಅಂದರೆ ಸರ್ಕಾರ ಕಮಿಷನ್ ಸರ್ಕಾರ ಎನ್ನುವುದಕ್ಕೆ ಸರ್ಕಾರವೇ ಪ್ರೂಫ್ ಕೊಟ್ಟಂತಾಗಿದೆ. ಸಚಿವರೇ ಸ್ಪಷ್ಟನೆ ಕೊಟ್ಟಂತಾಗಿದೆ. ಜನರ ಮೇಲೆ ಇದು ರಿಫ್ಲೆಕ್ಟ್ ಆಗುತ್ತೆ. ಎಂಟಿಬಿ ನಾಗರಾಜ್ ಹೇಳಿಕೆ ಬಗ್ಗೆ ತನಿಖೆ ಆಗಲಿ. ಹಣ ಪಡೆದು ವರ್ಗಾವಣೆ ಮಾಡಿರುವುದು ಅಕ್ಷಮ್ಯ ಅಪರಾಧ. ಸಚಿವರನ್ನ ಕರೆದು ತನಿಖೆ ನಡೆಸಬೇಕು. ಎಂಟಿಬಿ ನಾಗರಾಜ್ ಸರ್ಕಾರದ ಭಾಗವಾಗಿರುವವರು. ಅವರಿಂದ ಏನು ಮಾಹಿತಿ ಇದೆ ಎಂಬುದನ್ನ ತಿಳಿದುಕೊಳ್ಳಬೇಕು. ಇದು ಕಮಿಷನ್ ಸರ್ಕಾರ ಅನ್ನೋದಕ್ಕೆ ಸಚಿವರ ಹೇಳಿಕೆಯೇ ಸಾಕ್ಷಿಯಾಗಿದೆ. ಮಾಧುಸ್ವಾಮಿ ಕೂಡ ಸರ್ಕಾರ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ ಎಂದರು.