ಜ್ಞಾನ ಯೋಗಾಶ್ರಮದ ಜ್ಞಾನ ಜ್ಯೋತಿಯು ಶಾಂತವಾಯಿತು. ಸಿದ್ದಪುರಷ ಸಿದ್ದೇಶ್ವರ ಶ್ರೀಗಳು ಶಿವಾದೀನರಾಗಿದ್ದಾರೆ. ನಾಡು, ದೇಶ, ಅಂತಾರಾಷ್ಟ್ರಮಟ್ಟದಲ್ಲಿ ಪ್ರವಚನಗಳನ್ನು ಮಾಡಿ ಭಕ್ತರಿಗೆ ಆಶಿರ್ವದಿಸುತ್ತಿದ್ದರು. ನಡೆದಾಡುವ ದೇವರೆಂದೇ ಖ್ಯಾತರಾಗಿದ್ದರು. ಇವರು ಲಿಂಗೈಕ್ಯರಾಗಿದ್ದಾರೆ. ಶ್ರೀಗಳು ದೇಹ ನಶ್ವರ ಆತ್ಮ ಒಂದೇ ಶಾಶ್ವತ, ಸರಳತೆಯಲ್ಲೇ ಜೀವನದ ಸತ್ಯವನ್ನು ಕಂಡುಕೊಂಡವರು. ಜ್ಞಾನದ ಮೂಲಕ ಜೀವ ಸಂಕಲಕ್ಕೆ ಬೆಳಕಾದವರು. ಶ್ರೀಗಳು ದೇಹ ತ್ಯಾಗಕ್ಕೂ ಮುನ್ನ ಬೆರೆದ ಅಂತಿಮ ಅಭಿವಂದನ ಪತ್ರದಲ್ಲಿ ಕೆಲ ವಿಷಯಗಳನ್ನು ತಿಳಿಸಿದ್ದಾರೆ. ಅದರಲ್ಲಿ ಬದುಕು ಅನುಭವಗಳ ಪ್ರವಾಹ. ಅದರ ಸಿರಿವಂತಿಕೆಯು ವಿಶ್ವ ಚಿಂತನೆ ಹಾಗೂ ಸತ್ಯ ಶೋಧನೆಗಳಿಂದ, ಅಸೀಮಿತವಾದ ಸದ್ಭಾವದಿಂದ ಅದನ್ನು ಸಮೃದ್ಧಗೊಳಿಸುವುದೇ ಸಾಧನೆ. ಅಂತಹ ಜೀವನದ ಉಪಯುಕ್ತವಾದ ಅನುಭವಗಳನ್ನು ಆಸಕ್ತರೊಂದಿಗೆ ಹಂಚಿಕೊಳ್ಳುವುದೆ ಧರ್ಮ. ಅದು ಸ್ವ-ಪರ ನೆಮ್ಮದಿಗೆ ಕಾರಣ ಎಂದು ಬರೆದಿದ್ದಾರೆ. ದೇಹವನ್ನು ಭೂಮಿಯಲ್ಲಿಡುವ ಬದಲು ಅಗ್ನಿಯಿಂದ ಸ್ಪರ್ಶ ಮಾಡಬೇಕು. ಶ್ರಾದ್ಧಿಕ ವಿಧಿ-ವಿಧಾನಕರ್ಮಗಳು ಅನಗತ್ಯವಾದವುಗಳಾಗಿದೆ. ಚಿತಾಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜಿಸುವುದು. ಯಾವುದೇ ಬಗೆಯ ಸ್ಮಾರಕ ನಿರ್ಮಿಸಬಾರದು ಎಂದು ಶ್ರೀಗಳು ಪ್ರತದಲ್ಲಿ ಬರೆದಿದ್ದಾರೆ.