Publish Date: Sat, 04 Jan 2020 (11:01 IST)
Updated Date: Sat, 04 Jan 2020 (11:04 IST)
ಚಿಂಚೋಳಿ : ಚಿಂಚೋಳಿಗೆ ನೀಡಿದ ಅನುದಾನ ಕಡಿತದ ಕುರಿತು ಬಿಜೆಪಿ ಸಂಸದ ಉಮೇಶ್ ಜಾಧವ್ ಅವರಿಗೆ ಕೈ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದಾರೆ.
ಚಿಂಚೋಳಿ ಅಭಿವೃದ್ಧಿಗೆ ಅನುದಾನ ನೀಡ್ತಿಲ್ಲವೆಂದು ಸಮ್ಮಿಶ್ರ ಸರ್ಕಾರದ ವಿರುದ್ಧ ಆರೋಪಿಸಿ ರಾಜೀನಾಮೆ ನೀಡಿದ್ರಿ. ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ನೀವು ರಾಜೀನಾಮೆ ನೀಡಿದ್ದೀರಿ, ಬಳಿಕ ಬಿಜೆಪಿಗೆ ಹೋಗಿ ನಿಮ್ಮ ಪುತ್ರನಿಗೆ ಟಿಕೆಟ್ ಕೊಡಿಸಿ ನಿಮ್ಮ ಪುತ್ರನನ್ನು ಗೆಲ್ಲಿಸಿಕೊಂಡಿದ್ದೀರಿ. ಈಗ ಈ ಹಿಂದೆ ನೀಡಿದ್ದ ಅನುದಾನವನ್ನೂ ಕಡಿತ ಮಾಡಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ 30 ಕೋಟಿ ರೂ. ಅನುದಾನ ನೀಡಿದ್ದರು. ಇದರಲ್ಲಿ 20ರೂ.ಕೋಟಿ ಕಡಿತವಾಗಿದೆ. ಹೀಗಾಗಿ ನೀವು ಬಿಜೆಪಿ ಸಂಸದ ಸ್ಥಾನಕ್ಕೆ ಯಾವಾಗ ರಾಜೀನಾಮೆ ನೀಡುತ್ತೀರಿ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
pavithra
Publish Date: Sat, 04 Jan 2020 (11:01 IST)
Updated Date: Sat, 04 Jan 2020 (11:04 IST)