Publish Date: Sat, 19 Jan 2019 (20:27 IST)
Updated Date: Sat, 19 Jan 2019 (20:30 IST)
ಇಂದಿರಾ ಕ್ಯಾಂಟೀನ್ ಗೆ ಸಂಸದರೊಬ್ಬರು ಭೇಟಿ ನೀಡಿ ಅಲ್ಲಿನ ಆಹಾರದ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿದರು.
ಸಂಸದ ಆರ್.ದೃವನಾರಾಯಣ್ ದಿಢೀರ್ ಭೇಟಿ ನೀಡಿ ಕ್ಯಾಂಟೀನ್ ನಲ್ಲಿ ಪರಿಶೀಲನೆ ಮಾಡಿದರು.
ಗುಂಡ್ಲುಪೇಟೆ ತಾಲೂಕಿನಲ್ಲಿರುವ ಇಂದಿರಾ ಕ್ಯಾಂಟೀನ್ ಗೆ ಅವರು ಭೇಟಿ ನೀಡಿದರು. ಗುಂಡ್ಲುಪೇಟೆ ತಾಲೂಕಿನಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭವಾಗಿ ಕೆಲವೇ ತಿಂಗಳುಗಳು ಕಳೆದಿವೆ ಅಷ್ಟೇ.
ಇಂದಿರಾ ಕ್ಯಾಂಟೀನ್ ಗಳಲ್ಲಿನ ಆಹಾರದ ಗುಣಮಟ್ಟ ತಿಳಿಯಲು ಯಾವುದೇ ಮಾಹಿತಿ ನೀಡದೆ ಸಂಜೆ ದಿಢೀರ್ ಭೇಟಿ ನೀಡಿದರು. ಉಪಹಾರ ಸೇವನೆ ಮಾಡುವುದರ ಮೂಲಕ ಆಹಾರದ ಗುಣಮಟ್ಟ ಬಗ್ಗೆ ಪರಿಶೀಲನೆ ನಡೆಸಿದರು.
ಸಾಮಾನ್ಯ ವರ್ಗದ ಜನರಿಗೆ ಕ್ಯಾಂಟೀನ್ ಸಹಕಾರಿಯಾಗಿದೆ. ಎಲ್ಲರಿಗೂ ಉತ್ತಮ ಗುಣಮಟ್ಟದ ಆಹಾರ ನೀಡುವಂತೆ ಕ್ಯಾಂಟೀನ್ ವ್ಯವಸ್ಥಾಪಕರಿಗೆ ಸಂಸದರು ಸೂಚನೆ ನೀಡಿದರು.