Publish Date: Sat, 19 Jan 2019 (19:57 IST)
Updated Date: Sat, 19 Jan 2019 (19:59 IST)
ಬಿಜೆಪಿಯವರು ಹೇಗೆ ಲೋಕಸಭೆಯಲ್ಲಿ ಎತ್ತಾಕಬೇಕು ಅಂತ ರೆಸಾರ್ಟ್ ನಲ್ಲಿ ಇದ್ದಾರೆ. ಅದೇ ರೀತಿ ಕಾಂಗ್ರೆಸ್ ನವರು ಎಂಪಿ ಚುನಾವಣೆಯಲ್ಲಿ ಗೆಲ್ಲೋದಕ್ಕೆ ರೆಸಾರ್ಟ್ ನಲ್ಲಿ ಇದ್ದಾರೆ. ಬಿಜೆಪಿ ಆಟ ಇನ್ಮೇಲೆ ನಡೆಯಲ್ಲ,ಇನ್ಮೇಲೆ ನಮ್ಮ ಆಟ ಎಂದು ಸಚಿವರೊಬ್ಬರು ಹೊಸ ಬಾಂಬ್ ಹಾಕಿದ್ದಾರೆ.
ಪರೋಕ್ಷವಾಗಿ ಆಪರೇಷನ್ ಜೆಡಿಎಸ್ ಸುಳಿವನ್ನು ಸಚಿವ ಸಿ.ಎಸ್.ಪುಟ್ಟರಾಜು ನೀಡಿದ್ದಾರಾ ಎನ್ನುವ ಚರ್ಚೆ ಶುರುವಾಗಿದೆ. ಜೆಡಿಎಸ್ ನಲ್ಲಿ ಎಲ್ಲಾ ಪಕ್ಕ ಇದೀವಿ ಎಂದ ಅವರು,ಇನ್ನೇನಿದ್ದರೂ ನಮ್ದೆ ಆಟ ಎಂದಿದ್ದಾರೆ.
ಮಂಡ್ಯದಲ್ಲಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿಕೆ ನೀಡಿದ್ದು, ಕಾಂಗ್ರೆಸ್ ಬಿಟ್ಟುಕೊಡುವ 10 ರಿಂದ 12 ಸ್ಥಾನಗಳಲ್ಲಿ ನಾವು ಗೆಲ್ಲುತ್ತೇವೆ ಎಂದರು.
ಇನ್ನು ಕೋಲ್ಕತ್ತದಿಂದ ಸಿಎಂ ಬಂದ ಬಳಿಕ ಜೆಡಿಎಸ್ ಶಾಸಕರು ರೆಸಾರ್ಟ್ ಸೇರುವ ಮಾತೇ ಇಲ್ಲ. ಪ್ರತಿನಿತ್ಯ ಜೊತೆಯಲ್ಲೇ ಇರ್ತೀವಿ ಹಾಗಾಗಿ ಸ್ಪೆಷಲ್ ಆಗಿ ಸೇರುವ ಅಗತ್ಯ ಇಲ್ಲ ಎಂದಿದ್ದಾರೆ.