Publish Date: Mon, 21 Jan 2019 (19:14 IST)
Updated Date: Mon, 21 Jan 2019 (19:16 IST)
ಶ್ರೀ ಶಿವಕುಮಾರಸ್ವಾಮಿಗಳು 111 ವರ್ಷಗಳ ಶತಾಯುಷಿಗಳಾಗಿ, ಈ ದೇಶಕ್ಕೆ ಹಾಗೂ ರಾಜ್ಯಕ್ಕೆ ದೊಡ್ಡ ಕಾಣಿಕೆಯನ್ನ ನೀಡಿದ್ದಾರೆ ಎಂದು ಸಂಸದರು ಸ್ಮರಿಸಿದ್ದು, ಶ್ರೀಗಳ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
ಶ್ರೀ ಬಸವೇಶ್ವರರ ತತ್ವ ಸಿದ್ದಾಂತಗಳನ್ನ ಚಾಚು ತಪ್ಪದೇ ಪಾಲಿಸಿ, ಲಕ್ಷಾಂತರ ಬಡ ಮಕ್ಕಳಿಗೆ ಶಿಕ್ಷಣವನ್ನು, ದಾಸೋಹವನ್ನು ಕೊಟ್ಟು, ಶೈಕ್ಷಣಿಕ ಕ್ಷೇತ್ರದಲ್ಲಿ ಒಂದು ದೊಡ್ಡ ಕ್ರಾಂತಿಯನ್ನೇ ಮಾಡಿದತಂಹವರು ಸಿದ್ದಗಂಗಾ ಶ್ರೀಗಳಾಗಿದ್ದಾರೆ ಎಂದ ಸಂಸದ ಧ್ರುವನಾರಾಯಣ್ ಹೇಳಿದ್ದಾರೆ.
ಮೇರು ವ್ಯಕ್ತಿತ್ವದ ಪರಮಪೂಜ್ಯರು ಇಂದು ಅಗಲಿರುವುದು, ರಾಜ್ಯಕ್ಕೆ, ರಾಷ್ಟ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಶ್ರೀಗಳು ಬಡವರ, ಬಡವಿದ್ಯಾರ್ಥಿಗಳ ಏಳಿಗೆಗಾಗಿ ಸದಾ ಕಾಲ ತುಡಿಯುತ್ತಿದ್ದಂತಹವರು. ಇಂತಹ ತ್ಯಾಗಮೂರ್ತಿಯ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ ಎಂದು ಸಂಸದರು ಕಂಬನಿ ಮಿಡಿದಿದ್ದಾರೆ.