Publish Date: Mon, 16 Sep 2019 (10:43 IST)
Updated Date: Mon, 16 Sep 2019 (10:45 IST)
ತುಮಕೂರು : ಚಿತ್ರದುರ್ಗದ ಬಿಜೆಪಿ ಸಂಸದ ನಾರಾಯಣಸ್ವಾಮಿ ಅವರು ರಸ್ತೆಯಲ್ಲಿ ಬಿದ್ದಿದ್ದ ಕಸ ಸ್ವಚ್ಛಗೊಳಿಸುವುದರ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಚ ಭಾರತ್ ನಿಯಮವನ್ನು ಪಾಲಿಸಿದ್ದಾರೆ.
ಭಾನುವಾರ ನಡೆದ ಗಣೇಶೋತ್ಸವದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆಯ ವೇಳೆ ರಸ್ತೆಯಲ್ಲಿ ಕಸ ಬಿದ್ದಿತ್ತು. ಮೆರವಣಿಗೆ ಮುಗಿದ ಮೇಲೆ ರಾತ್ರಿ ಎಲ್ಲಾ ರಸ್ತೆಗಳನ್ನು ಸಂಸದ ನಾರಾಯಣಸ್ವಾಮಿ ಪೊರಕೆ ಹಿಡಿದು ಸ್ವಚ್ಛಗೊಳಿಸಿದ್ದಾರೆ.
ಸಂಸದರಿಗೆ ಸ್ಥಳೀಯ ಬಿಜೆಪಿ ಮುಖಂಡರ ಎಸ್.ಆರ್ ಗೌಡ ಸೇರಿದಂತೆ ಹಲವರು ಸಾಥ್ ನೀಡಿದ್ದರು.