Select Your Language

Notifications

webdunia
webdunia
webdunia
webdunia

ಬಾಯಿಗೆ ಬಟ್ಟೆ ತುರುಕಿ ಖಾಲಿ ಮನೆಗೆ ಎಳೆದೊಯ್ದು ಅಪ್ರಾಪ್ತೆ ಮೇಲೆ ಅತ್ಯಾಚಾರ

ಬಾಯಿಗೆ ಬಟ್ಟೆ ತುರುಕಿ ಖಾಲಿ ಮನೆಗೆ ಎಳೆದೊಯ್ದು ಅಪ್ರಾಪ್ತೆ ಮೇಲೆ ಅತ್ಯಾಚಾರ
ಕಲಬುರಗಿ , ಗುರುವಾರ, 12 ಮಾರ್ಚ್ 2020 (18:25 IST)
ಅಪ್ರಾಪ್ತ ಬಾಲಕಿಯೊಬ್ಬಳಿಗೆ ಬಾಯಿಗೆ ಬಟ್ಟೆ ತುರುಕಿ ಹಾಳು ಮನೆಯೊಂದಕ್ಕೆ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಯಂಪಳ್ಳಿಯ ಪ್ರಶಾಂತ ತಂದೆ ಚಂದ್ರಶಾ ಜಮಾದಾರ್ ಅತ್ಯಾಚಾರ ಎಸಗಿದ ಅಪರಾಧಿಯಾಗಿದ್ದಾನೆ.

ಲೈಂಗಿಕ ಕ್ರಿಯೆಗೆ ಸಹಕರಿಸದ ಬಾಲಕಿಯ ಬಾಯಿಗೆ ಬಟ್ಟೆ ಕಟ್ಟಿ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದನು.

ಈ ಕುರಿತು ಚಿಂಚೋಳಿ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಇದೀಗ ಆರೋಪಿಯ ಅಪರಾಧ ಸಾಬೀತಾಗಿದ್ದರಿಂದಾಗಿ ಆತನಿಗೆ ಐಪಿಸಿ 366 ಎ ಅಡಿ 10 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ಮತ್ತು ಪೋಕ್ಸೋ ಕಾಯ್ದೆಯಡಿ ಜೀವಾವಧಿ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ಆಸೆ ತೋರಿಸಿ ಅಪ್ರಾಪ್ತೆ ಜೊತೆ ಮಲಗಿದ : ಜೈಲು ಸೇರಿ ಜೀವಾವಧಿ ಶಿಕ್ಷೆಗೆ ಗುರಿಯಾದ