Publish Date: Tue, 08 Aug 2023 (14:25 IST)
Updated Date: Tue, 08 Aug 2023 (14:39 IST)
18 ವರ್ಷ ದಾಟದೇ ಇರುವ ವಿದ್ಯಾರ್ಥಿಗಳಲ್ಲಿ ನಶೆಯ ಆಸೆಯ ಗುಂಗು ಶುರುವಾಗಿದೆ.ಈ ಹಿನ್ನೆಲೆ ಗೃಹ ಸಚಿವರಿಗೆ ಕ್ಯಾಮ್ಸ್ ಅಧ್ಯಕ್ಷ ಶಶಿಕುಮಾರ್ ಪತ್ರ ಬರೆದಿದ್ದಾರೆ.
ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಸುಲಭವಾಗಿ ಮದ್ಯಪಾನ ಹಾಗೂ ಧೂಮಪಾನ ಸಿಗುತ್ತಿರುವ ಬಗ್ಗೆ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಯಾವುದೇ ವಯಸ್ಸಿನ ಪರೀಶಿಲನೆ ಇಲ್ಲದೇ ಇಂತಹ ವಸ್ತುಗಳು ಮಕ್ಕಳಿಗೆ ದೊರಕುತ್ತಿದೆ ಎಂದು ದೂರಲ್ಲಿ ಉಲ್ಲೇಖಿಸಿದ್ದಾರೆ.ಇದರಿಂದ ಶಾಲಾ ವಾತವರಣ ಹಾಳಾಗುತ್ತಿದ್ದು, ಇದರ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿದ್ದಾರೆ.ಇನ್ನೂ ಸಂಬಂಧಪಟ್ಟ ಇಲಾಖೆಗೆ ಇದರ ಬಗ್ಗೆ ಗಮನ ಹರಿಸಲು ಸೂಚನೆ ನೀಡಬೇಕೆಂದು ಕೋರಿ ಗೃಹ ಸಚಿವ ಜಿ ಪರಮೇಶ್ವರ್‌ಗೆ ಪತ್ರ ಬರೆದಿದ್ದಾರೆ.